ಉಡುಪಿ: ಕಾಲೇಜಿನಿಂದ ಅನುಮತಿ ಪಡೆದು ಹೊರಹೋಗಿದ್ದ ಯುವತಿ ನಾಪತ್ತೆ..!

ಉಡುಪಿಯ ಕಾಲೇಜೊಂದರಿಂದ ಅನುಮತಿ ಪಡೆದು ಹೊರ ಹೋದ ಯುವತಿಯೊಬ್ಬಳು, ಬಳಿಕ‌ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಯುವತಿಯನ್ನು ಪಡುಬೆಳ್ಳೆ ನಿವಾಸಿ ಸ್ಟೀಫನ್ ಅಮ್ಮನ್ ಅವರ ಪುತ್ರಿ 20ವರ್ಷದ ರಿಯೋನಾ ಅಮ್ಮನ್ನ ಎಂದು ಗುರುತಿಸಲಾಗಿದೆ. ಈಕೆ ಎಂದಿನಂತೆ ಜನವರಿ 13 ರಂದು ಉಡುಪಿಯ ಕಾಲೇಜಿಗೆ‌ ಹೋಗಿದ್ದು, ಮಧ್ಯಾಹ್ನ ಅನುಮತಿ ಪಡೆದು ಹೊರ ಹೋಗಿದ್ದಾಳೆ. ಆ ಬಳಿಕ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಆಕೆಯ ತಾಯಿ ರೀಟಾ ಅಮ್ಮನ್ನ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಿಯೋನಾ ಅಮ್ಮನ್ನ 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾಳೆ. ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದಿದ್ದಾಳೆ. ಈಕೆ ಕನ್ನಡ, ಇಂಗ್ಲೀಷ್, ತುಳು ಭಾಷೆ ಮಾತನಾಡುತ್ತಿದ್ದು, ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಉಡುಪಿ ನಗರ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ.

Check Also

ಅಕ್ರಮ ಮೀನುಗಾರಿಕೆ – ಮಲ್ಪೆಯ ಎರಡು ಮೀನುಗಾರಿಕೆ ಬೋಟ್‌ಗಳು ಗೋವಾದಲ್ಲಿ ವಶಕ್ಕೆ

ಮಲ್ಪೆ: ಗೋವಾದ ಕಡಲ ಗಡಿಗೆ ಅಕ್ರಮವಾಗಿ ನುಗ್ಗಿ ಬುಲ್ ಟ್ರಾಲಿಂಗ್ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಎರಡು ಮೀನುಗಾರಿಕಾ ಬೋಟ್ …

Leave a Reply

Your email address will not be published. Required fields are marked *

You cannot copy content of this page.