ಕುದ್ರೋಳಿ ಶ್ರೀಗೋಕರ್ಣನಾಥ ದೇವರಿಗೆ ಶತ ಸೀಯಾಳಾಭಿಷೇಕ ಮಂಗಳೂರು, ಜೂ., 09: ಬಿಸಿಲಿನ ಬೇಗೆಯಿಂದ ಬಳಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಕಣ್ಣಮುಚ್ಚಾಲೆ ಆಟ ಕಂಡುಬಂದಿದೆ. ಕರಾವಳಿಗೆ ಇನ್ನೂ ಮುಂಗಾರು ಪ್ರವೇಶ ಆಗಿಲ್ಲ. ಮತ್ತೊಂದೆಡೆ ಸುಡುಬಿಸಿಲಿನ ತಾಪಮಾನದಿಂದ ಇಲ್ಲಿನ ಜನರು ತತ್ತರಿಸಿದ್ದಾರೆ. ನದಿ, ತೊರೆಗಳು ಸಂಪೂರ್ಣ ಬತ್ತಿ ಹೋಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಆದ್ದರಿಂದ ಶೀಘ್ರ ಮಳೆ ಸುರಿಯುವಂತೆ ಹಾಗೂ ಲೋಕಕಲ್ಯಾರ್ಥವಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕುದ್ರೋಳಿ ಶ್ರೀಗೋಕರ್ಣನಾಥ ದೇವರಿಗೆ ಶತ ಸೀಯಾಳಾಭಿಷೇಕ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ …
Read More »ವಿಶೇಷ ವರದಿ
ಬಿಪರ್‌ಜಾಯ್ ಚಂಡಮಾರುತ: ಜೂ. 11ರಿಂದ ಮೂರು ದಿನ ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್!
ಬೆಂಗಳೂರು, ಜೂ. 8: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪರ್‌ಜಾಯ್ ಚಂಡಮಾರುತ ಪ್ರಭಾವವು ಕರಾವಳಿ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ಮೇಲೂ ಬೀರಿದೆ. ಮುಂದಿನ ಎರಡು ದಿನ ರಾಜ್ಯದಲ್ಲಿ ಹಗುರ ಮಳೆ ಕಂಡು ಬರಲಿದೆ. ಜೂನ್ 11ರಿಂದ ಮೂರು ದಿನ ಮಳೆ ಅಬ್ಬರ ಹೆಚ್ಚಿರಲಿದೆ. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಘೊಷಿಸಲಾಗಿದೆ. ಜೂನ್ 11ರಿಂದ ಮೂರು ದಿನ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಭಾರಿ ಮಳೆ …
Read More »ಮೂರು ದಶಕಗಳ ಬಳಿಕ ಕಟೀಲು ಕ್ಷೇತ್ರದಲ್ಲಿ ಭೀಕರ ಜಲಕ್ಷಾಮ: ಸಂಪೂರ್ಣ ಬತ್ತಿದ ನಂದಿನಿ ನದಿ
ಮಂಗಳೂರು, ಜೂ. 08: ಮುಂಗಾರು ತಡವಾದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಜನಸಾಮಾನ್ಯರು ಹೊಟೇಲ್, ವಾಣಿಜ್ಯ ಉದ್ಯಮಗಳಿಗೆ ನೀರಿನ ಅಭಾವ ತೊಂದರೆಯನ್ನುಂಟು ಮಾಡಿದ್ದು, ಇದೀಗ ದೇವರಿಗೂ ನೀರಿನ ಅಭಾವದ ಬಿಸಿ ತಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ಶ್ರದ್ಧಾ ಭಕ್ತಿಯ ಆರಾಧ್ಯ ಕೇಂದ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೀಕರ ಜಲಕ್ಷಾಮ ತಲೆದೂರಿದೆ. ಮೂವತ್ತೊಂದು ವರ್ಷದ ಬಳಿಕ ಕಟೀಲು ಕ್ಷೇತ್ರ ತೀವ್ರದ ಜಲಕ್ಷಾಮ ಕಂಡಿದ್ದು, ಕ್ಷೇತ್ರದ ಪರಮ ಪವಿತ್ರ ನಂದಿನಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ನದಿ ಬತ್ತಿ ಇತರ ಜಲಮೂಲಗಳಲ್ಲೂ ನೀರಿನ ಪ್ರಮಾಣ …
Read More »ಕೊನೆಗೂ ಇಂದು ಕೇರಳ ಪ್ರವೇಶಿಸಿದ ಮಾನ್ಸೂನ್ ಕರಾವಳಿಗೆ ಇನ್ನಾದರೂ ಕೃಪೆ ತೋರುತ್ತಾನ ವರುಣ?
ವೇಣೂರು: ಬೆಂಗಳೂರು ಸೇರಿದಂತೆ ರಾಜ್ಯದ ಅಲ್ಲಲ್ಲಿ ಭಾರೀ ಮಳೆಯಾಗುತ್ತಿರುವ ಹಲವು ದಿನಗಳಿಂದ ಕೇಳುತ್ತಿದ್ದೇವೆ. ಇದೀಗ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಭಾರೀ ಮಳೆಯಾಗಿದೆ. ವಿಪರ್ಯಾಸವೆಂದರೆ ತಾಲೂಕಿನ ಕೆಲವು ಭಾಗದಲ್ಲಿ ಇನ್ನೂ ಹೇಳಿಕೊಳ್ಳುವಂತಹ ಮಳೆ ಸುರಿದೇ ಇಲ್ಲ. ಕುಡಿಯುವ ನೀರಿಗಾಗಿ ಹಾಹಾಕಾರ ಅಷ್ಟಿಷ್ಟಲ್ಲ. ತಾಲೂಕಿನ ಶಿರ್ಲಾಲುವಿನಲ್ಲಿ ನಿನ್ನೆ ಭಾರೀ ಮಳೆ ಸುರಿದು ನದಿಗಳಲ್ಲಿ ಈಗಲೂ ನೀರು ಹರಿಯುತ್ತಿದೆ. ಆದರೆ ವೇಣೂರಿಗೆ ಒಂದೆರಡು ಸಣ್ಣ ಮಳೆ ಬಿಟ್ಟರೆ ಈ ಬಾರಿ ಮಳೆಯೇ ಬಿದ್ದಿಲ್ಲ. ಇಲ್ಲಿಯ ಫಲ್ಗುಣಿ ನದಿಯಲ್ಲಿ ಒಂದು ಹನಿಯೂ ನೀರಿಲ್ಲ. ಬೊಗ್ಗುರಕುಂಡಿ …
Read More »ಉಡುಗೋರೆ ಹಣದೊಂದಿಗೆ ಹೆಚ್ಚುವರಿ ರೂ. 1 ನೀಡುವುದೇಕೆ ಗೊತ್ತಾ..?!
ವೇಣೂರು, 5: ಯಾವುದೇ ಕಾರ್ಯಕ್ರಮವಿರಲಿ ವಸ್ತು ರೂಪದ, ಕಾಯಕದ ಸಹಕಾರ ಬೇಡುವ ಕಾಲವೊಂದಿತ್ತು. ಆದರೆ ಬರಬರುತ್ತಾ ಮನುಷ್ಯ ಸ್ವಾವಲಂಬಿಯಾಗಿದ್ದಾನೆ. ತಾನೇ ತಯಾರು ಮಾಡಿ ಇನ್ನೊಬ್ಬರ ಸಹಾಯವನ್ನು ಕಡಿಮೆ ಅಪೇಕ್ಷಿಸಿದಂತೆ ವಸ್ತು ಮತ್ತು ಕಾಯಕ ರೂಪದ ಸಹಕಾರಗಳು ವಿರಳವಾದವು. ಆಗ ಪ್ರಾರಂಭವಾದದ್ದೇ ಈ ಕವರ್ ಎನ್ನುವ ಧನರೂಪದ ಉಡುಗೋರೆ! ಕವರಿನ ಒಳಗಡೆ ನೂರು ರೂಪಾಯಿಯಾದರೂ ಸರಿ ಐನೂರು ರೂಪಾಯಿಯಾದರೂ ಸರಿ ಕೊಡುವವನ ಶಕ್ತಿಯನುಸಾರ ಮುಜುಗರವಿಲ್ಲದೆ ಕೊಡಬಹುದು. ಹಾಗೂ ಇನ್ನೊಬ್ಬರಿಗೆ ಅದರೊಳಗಿನ ಮೊತ್ತ ಗೊತ್ತಾಗದ ಕಾರಣ ಉಡುಗೋರೆಯ ಗಾತ್ರದಿಂದ ಪ್ರತಿಷ್ಠೆಯನ್ನು ಅಳೆದು ಉಪಚರಿಸುವ ಸಂಪ್ರದಾಯ ಇತಿಶ್ರೀ ಹೇಳಬಹುದಾದಂತಹ …
Read More »ಮಹಿಮಾಸಾಗರ್ ಮುನಿಮಹಾರಾಜರ ಮಹಿಮೆಯಿಂದಲೇ ನಾವು ಬದುಕುಳಿದೆವು!
ವೇಣೂರು, ಮೇ 5: ಭಾರತ ದೇಶ ಇದುವರೆಗೆ ನೋಡಿರದಂತಹ ರೈಲು ದುರಂತವೊಂದನ್ನು ಕಂಡಿದೆ. ಒಡಿಶಾ ಬಾಲಾಸೂರ್ ಬಳಿ ತ್ರಿವಳಿ ರೈಲು ದುರಂತ ನಡೆದಿದ್ದು, ದೇಶವೇ ಬೆಚ್ಚಿಬಿದ್ದಿದೆ. ತ್ರಿವಳಿ ರೈಲು ಅಪಘಾತದಲ್ಲಿ ೨೭೫ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಮಿಕ್ಕಿ ಜನ ಗಾಯಗೊಂಡಿದ್ದಾರೆ.ದ.ಕ., ಉಡುಪಿ, ಸಂಸೆ, ಕಳಸ, ಹೊರನಾಡು ಸುತ್ತಮುತ್ತದ ಜೈನಬಂಧುಗಳು ಮಹಿಮಾಸಾಗರ ಮುನಿ ಮಹಾರಾಜರ ಸಂಕಲ್ಪದಂತೆ ೧೦೮ ಜನ ಜಾರ್ಖಂಡ್ ರಾಜ್ಯದಲ್ಲಿರುವ ಶಿಖರ್ಜಿ ಪವಿತ್ರ ಸ್ಥಳಕ್ಕೆ ತೀರ್ಥಯಾತ್ರೆಗೆ ಹೊರಟಿದ್ದರು. ಅದರಲ್ಲಿ ವೇಣೂರಿನ ಆಶಾಲತಾ ಜೈನ್, ಮಮತಾ ಜೈನ್ ಹಾಗೂ ದೀಪಾಶ್ರೀ ಜೈನ್ ಕತ್ತೋಡಿ ಅವರು …
Read More »ವಿಶಾಖಪಟ್ಟಣದಲ್ಲಾದ ಆ ಒಂದು ಬದಲಾವಣೆಯಿಂದ ನಾವಿಂದು ಜೀವಂತವಾಗಿದ್ದೇವೆ..!
ನೀರಿಗಾಗಿ ಪರದಾಡಿದರು…. ಖಾಲಿ ಬಾಟಲಿ ಸಂಗ್ರಹಿಸಿದರು…ಗಾಯಾಳು ಯಾತ್ರಿಗಳು ನಮ್ಮ ಬೋಗಿಗೆ ಬಂದರು, ಅಂಗಿ ಪ್ಯಾಂಟ್ ರಕ್ತಸಿಕ್ತವಾಗಿತ್ತು….!ಬ್ಯಾಂಡೇಡ್, ನೋವಿನ ಮಾತ್ರೆ, ತಿಂಡಿ, ಫ್ರುಟ್ಸ್ ಕೊಟ್ಟೆವು, ಮಲಗಲು ನಮ್ಮ ಸೀಟ್ ಬಿಟ್ಟುಕೊಟ್ಟೆವು ಯಾತ್ರಿ ವೇಣೂರು ದೀಪಾಶ್ರೀ ಜೈನ್ ಕತ್ತೋಡಿ ಬಿಚ್ಚಿಟ್ಟ ಘಟನೆಯ ರೋಚನ ಕಥನನಿರೀಕ್ಷಿಸಿ ರೂರಲ್ ನ್ಯೂಸ್ ಎಕ್ಸ್‌ಪ್ರೆಸ್‌ನಲ್ಲಿ…..
Read More »ಸುರಕ್ಷಿತವಾಗಿ ಯಾತ್ರೆ ಮುಂದುವರಿಸಿದ ಜಿಲ್ಲೆಯ 21 ಯಾತ್ರಾತ್ರಿಗಳು. ಸುಮೇದ್ ಸಿಖರ್ಜಿಯಲ್ಲಿ ದೇವರ ದರ್ಶನ, ದ.ಕ. ಟೀಂ.ನ ಎಕ್ಸ್‌ಕ್ಲೂಸಿವ್ ಫೊಟೋ ಇಲ್ಲಿದೆ ನೋಡಿ
ವೇಣೂರು, ಜೂ. 4: ಒರಿಸ್ಸಾ ರಾಜ್ಯದ ಬಹನಾಗದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ವೇಣೂರು ಸಹಿತ ದ.ಕ. ಜಿಲ್ಲೆಯ 21 ಮಂದಿ ಜನರು ಸಿಲುಕಿಕೊಂಡಿದ್ದರು. ಆದರೆ ಇದೀಗ ಯಾತ್ರಿಗಳು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ಕೊಲ್ಕತ್ತ ನಗರದಿಂದ ಸುಮೇದ್ ಸಿಖರ್ಜಿಗೆ ತಲುಪಿ ದೇವರ ದರ್ಶನ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ವೇಣೂರಿನ ಮಮತಾ ಪ್ರಸಾದ್ ಜೈನ್, ಆಶಾಲತಾ ಜೈನ್ ಹಾಗೂ ದೀಪಾಶ್ರೀ ಕತ್ತೋಡಿ ಅಪಾಯದಿಂದ ಪಾರಾದವರು. ದ.ಕ. ಜಿಲ್ಲೆಯ ವೇಣೂರು, ಮಂಗಳೂರು, ಉಜಿರೆ, ಧರ್ಮಸ್ಥಳದಿಂದ ಒಟ್ಟು 21 ಮಂದಿ, ಕಳಸ ತಾಲೂಕಿನ ಸಂಸೆ, ಹೊರನಾಡು, ಕುದುರೆಮುಖ ಗ್ರಾಮಗಳ …
Read More »ಜೂ. 1: ವಿಶ್ವ ಹಾಲು ದಿನ ; ಪ್ರತಿದಿನ ಹಾಲು ಕುಡಿಯುವುದರಿಂದ ಪ್ರಯೋಜನಗಳೇನು?
ಜೂ. 1 ವಿಶ್ವ ಹಾಲು ದಿನ 2022ನ್ನು ಆಚರಿಸಲಾಗುತ್ತಿದೆ. ನಿಮ್ಮ ಹೃದಯದ ಆರೋಗ್ಯ, ಮೂಳೆಗಳ ಆರೋಗ್ಯ ಮತ್ತು ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು ಹಾಲು ಕುಡಿಯುವುದು ಪ್ರತಿ ಒಬ್ಬರಿಗೂ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೊಟೀನ್, ವಿಟಮಿನ್ ಡಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ವಿಟಮಿನ್ ಎ ನಂತಹ ಅಗತ್ಯ ಪೋಷಕಾಂಶಗಳ ಉಗ್ರಾಣವಾಗಿದೆ. ವಿಶ್ವ ಹಾಲು ದಿನದ ಪ್ರಯುಕ್ತ, ಪ್ರಮಾಣೀಕೃತ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಮತ್ತು ಸಲಹೆಗಾರರಾದ ಹಿಮಾಂಶಿ ಭಾಟಿಯಾ, ಹಾಲನ್ನು ಸೇವಿಸುವುದರಿಂದ ಆಗು ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ.. …
Read More »ಮಂಗಳೂರಿನಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ, ಯಾಕೆ? ಇಲ್ಲಿದೆ ವಿವರ
ಮಂಗಳೂರು, ಮೇ, 30: ಕೇರಳ ರಾಜ್ಯಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಆಗಲಿದೆ. ನಂತರ ರಾಜ್ಯಕ್ಕೂ ಮುಂದಿನ ಏಳೆಂಟು ದಿನದಲ್ಲಿ ಮುಂಗಾರು ಪ್ರವೇಶ ಆಗಲಿದೆ. ಇನ್ನು ಜೂನ್ 1ರಿಂದ ಭಾರೀ ಮಳೆ ಮುನ್ಸೂಚನೆ ಇರುವುದರಿಂದ, ಮತ್ತು ನಷ್ಟ ಅನುಭವಿಸಿದ ಹಿನ್ನೆಲೆ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಏರಲಾಗಿದೆ. ಇದರಿಂದ ಮೂರು ತಿಂಗಳುಗಳ ಕಾಲ ಮೀನುಗಾರಿಕೆಗೆ ವಿರಾಮ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಸಕ್ತ ಋತುವಿನ ಆರಂಭದಲ್ಲಿ ಸಮುದ್ರದಲ್ಲಿ ಹೇರಳ ಪ್ರಮಾಣದಲ್ಲಿ ಮತ್ಸ್ಯ ದೊರಕಿದ್ದರೂ, ಫೆಬ್ರವರಿ – ಮಾರ್ಚ್‌ನಲ್ಲಿಯೇ ಮತ್ಸ್ಯ ಕ್ಷಾಮ ತಲೆದೂರಿತ್ತು. ಪರಿಣಾಮ ಮೀನುಗಾರರು ಅವಧಿಗೆ …
Read More »