May 31, 2026
image (60)
ಬೆಂಗಳೂರು: ಮಟನ್ ಎಂದು ಹೇಳಿ ಗ್ರಾಹಕರಿಗೆ ಗೋಮಾಂಸ (ಬೀಫ್) ನೀಡುತ್ತಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರು ಹೋಟೆಲ್​​ ಮಾಲೀಕರನ್ನು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಂಧಿತರನ್ನು ಬ್ಯಾರತಿ ಗ್ರಾಮದ ಜಿಜೂ ಅಲೆಕ್ಸಾಂಡರ್ ಹಾಗೂ ಟಿಪ್ಪಣ್ಣ ಲೇಔಟ್‌ನ ಶಿಬು ಕೆ.ಬಿ. ಎಂದು ಗುರುತಿಸಲಾಗಿದೆ. ಕೇರಳ ಮೂಲದವರಾದ ಇವರು ಭೈರತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆರೋಪಿಗಳು ಬೊಮ್ಮನಹಳ್ಳಿಯಲ್ಲಿರುವ ಐಸಿರಿ ಹಬ್ ಕಾಯಲೋರಂ ರೆಸ್ಟೋರೆಂಟ್‌ನ ಮಾಲೀಕರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಕಾಯಲೋರಂ ರೆಸ್ಟೋರೆಂಟ್‌ನಲ್ಲಿ ಮಟನ್ ಎಂದು ಹೇಳಿ ಬೀಫ್ ನೀಡಲಾಗುತ್ತಿದೆ ಎಂಬ ಆರೋಪದ ಕುರಿತು ಗ್ರಾಹಕರಿಂದ ಹಲವು ದೂರುಗಳು ಬಂದಿದ್ದವು. ರೆಸ್ಟೋರೆಂಟ್‌ನ ಮೆನು ಕಾರ್ಡ್‌ನಲ್ಲಿ ಎಲ್ಲಿಯೂ ಬೀಫ್ ಉಲ್ಲೇಖಿಸಿರಲಿಲ್ಲ. ಆದರೆ ಮಟನ್ ಖಾದ್ಯಗಳನ್ನು ಆರ್ಡರ್ ಮಾಡಿದಾಗ ಗೋಮಾಂಸವನ್ನು ನೀಡಲಾಗುತ್ತಿದೆ ಎಂದು ಅನೇಕರು ದೂರಿದ್ದರು. ಈ ದೂರುಗಳ ಆಧಾರದ ಮೇಲೆ ಸಿವಿಲ್ ಉಡುಪಿನಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಗ್ರಾಹಕರ ಸೋಗಿನಲ್ಲಿ ಕಳುಹಿಸಲಾಗಿತ್ತು. ಅವರು ಖರೀದಿಸಿ ತಂದಿದ್ದ ಮಟನ್​​ ಖಾದ್ಯಗಳನ್ನು ಪರಿಶೀಲಿಸಿದಾಗ ಅದು ಮಟನ್ ಅಲ್ಲ, ಗೋಮಾಂಸ ಎಂಬುದು ದೃಢಪಟ್ಟಿತ್ತು ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣದ ಮತ್ತೊಬ್ಬ ಪಾಲುದಾರ ಅಭಿಲಾಶ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.  

About The Author

Leave a Reply

Your email address will not be published. Required fields are marked *

You cannot copy content of this page.