ನೇಪಾಳ: ಇಂದು ಪೋಖಾರಾ ವಿಮಾನ ನಿಲ್ದಾಣದಲ್ಲಿ ಸಂಭವಿಸಿದಂತ ವಿಮಾನ ದುರಂತ ( Nepal Aircraft crash ) ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 68ಕ್ಕೆ ಏರಿಕೆಯಾಗಿರೋದಾಗಿ ನೇಪಾಳದ ನಾಗರೀಕ ವಿಮಾನಯಾನ ಪ್ರಾಧಿಕಾರ ಖಚಿತ ಪಡಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ನೇಪಾಳ ನಾಗರೀಕ ವಿಮಾನಯಾನ ಪ್ರಾಧಿಕಾರವು, ಇಂದು ಪೋಖಾರಾ ವಿಮಾನ ನಿಲ್ದಾಣದ ಬಳಿಯಲ್ಲಿ ಅಪಘಾತಗೊಂಡ ವಿಮಾನದಲ್ಲಿ ಐವರು ಭಾರತೀಯರು, 15 ವಿದೇಶಿಗರು ಸೇರಿದಂತೆ 72 ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಈವರೆಗೆ 68 ಮಂದಿ ಸಾವನ್ನಪ್ಪಿರೋದಾಗಿ ತಿಳಿಸಿದೆ.
ಸ್ಥಳಕ್ಕೆ ನೇಪಾಳ ಪ್ರಧಾನಿ ಪಿಎಂ ಪ್ರಚಂಡ, ಗೃಹ ಸಚಿವ ಪೋಖರಾ ಭೇಟಿ ನೀಡಿದ್ದಾರೆ. ವಿನಾಮ ಅಪಘಾತ ಸಂಭವಿಸಿದ ಸ್ಥಳಕ್ಕೆ ಪ್ರಧಾನಿ ಪಿಎಂ ಪ್ರಚಂಡ, ಗೃಹ ಸಚಿವ ಪೋಖರಾ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಹೆಚ್ಚಿನ ತನಿಖೆ ನಡೆಸಲು 5 ಸದಸ್ಯರ ಸಮಿತಿಯನ್ನು ರಚಿಸಿರುವುದಾಗಿ ಹೇಳಿದ್ದಾರೆ.
ಇನ್ನು ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುವ ಹಿನ್ನೆಲೆಯಲ್ಲಿ ಕಠ್ಮಂಡಿವಿನಲ್ಲಿ ಒಂದು ದಿನ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ಕಠ್ಮಂಡುದಿಂದ ಪೋಖಾರಾಗೆ ಹೊರಟಿದ್ದ ಯೇತಿ ಏರ್ಲೈನ್ಸ್ ನ ಎಟಿಆರ್ 72 ವಿಮಾನವು ಇಂದು ಬೆಳಿಗ್ಗೆ ಕಾಸ್ಕಿ ಜಿಲ್ಲೆಯ ಪೋಖಾರಾದಲ್ಲಿ ಅಪಘಾತಕ್ಕೀಡಾಗಿತ್ತು. ಅಪಘಾತಕ್ಕೀಡಾದ ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.