ಈಗಿನ ಮಕ್ಕಳಿಗೆ ಪರೀಕ್ಷೆ ಎಂದರೆ ಅಗ್ನಿಪರೀಕ್ಷೆ. ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳ ಪರೀಕ್ಷೆ ತಯಾರಿಯು ಜೋರಾಗಿಯೇ ಇರುತ್ತದೆ. ಈ ಸಮಯದಲ್ಲಿ ತಾಯಂದಿರು ಓದು ಓದು ಎಂದು ಮಕ್ಕಳ ಹಿಂದೆಯೇ ಸುತ್ತುತ್ತಿರುತ್ತಾರೆ. ಆದರೆ ಕೆಲವು ಮಕ್ಕಳಿಗೆ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ. ಕೆಲ ಮಕ್ಕಳಂತೂ ಚೆನ್ನಾಗಿ ಓದಿಕೊಂಡಿದ್ದರೂ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣವೇ ಬ್ಲಾಂಕ್ ಆಗಿ ಬಿಡುತ್ತಾರೆ. ಓದಿದ್ದೆಲ್ಲವು ಮರೆತು ಹೋಗಲು ಕಾರಣಗಳು ಹಲವಾರಾಗಿದ್ದರೂ, ಆರಾಮದಾಯಕವಾಗಿ ಪರೀಕ್ಷೆ ಎದುರಿಸುವತ್ತ ಗಮನ ಹರಿಸಬೇಕು.ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆ ಸಣ್ಣ ಮಕ್ಕಳಿಂದ ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುತ್ತದೆ. …
Read More »ಶಿಕ್ಷಣ
ಜೂ. 11ರಂದು ವೇಣೂರು ಫಲ್ಗುಣಿ ನದಿಯಲ್ಲಿ ಸ್ವಚ್ಛತೆ-ಜನಜಾಗೃತಿ ಕಾರ್ಯಕ್ರಮ. ಆಳ್ವಾಸ್‌ನ NSS ಘಟಕ ಹಾಗೂ ವೇಣೂರು ಗ್ರಾ.ಪಂ. ಸಹಯೋಗ
ನಮ್ಮ ವೇಣೂರು, ನಮ್ಮ ಫಲ್ಗುಣಿ ಬನ್ನಿ… ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳೋಣ ವೇಣೂರು, ಜೂ. 8: ಮೂಡಬಿದಿರೆ ಪದವಿ ಆಳ್ವಾಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ವೇಣೂರು ಗ್ರಾ.ಪಂ. ಸಹಯೋಗದಲ್ಲಿ ಊರ ನಾಗರಿಕರ ಸಹಕಾರದೊಂದಿಗೆ ವೇಣೂರು ಫಲ್ಗುಣಿ ನದಿಯ ಮಹತ್ವ ಮತ್ತು ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮವು ಜೂ. 11ರಂದು ಬೆಳಿಗ್ಗೆ 8-30 ಗಂಟೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ. ಊರ ನಾಗರಿಕರು, ಆಸಕ್ತ ಸಂಘ ಸಂಸ್ಥೆಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಳ್ವಾಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.
Read More »ಜೂ. 11ರಂದು ವೇಣೂರು ಫಲ್ಗುಣಿ ನದಿಯಲ್ಲಿ ಸ್ವಚ್ಛತೆ-ಜನಜಾಗೃತಿ ಕಾರ್ಯಕ್ರಮ. ಆಳ್ವಾಸ್‌ನ NSS ಘಟಕ ಹಾಗೂ ವೇಣೂರು ಗ್ರಾ.ಪಂ. ಸಹಯೋಗ
ನಮ್ಮ ವೇಣೂರು, ನಮ್ಮ ಫಲ್ಗುಣಿ ಬನ್ನಿ… ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳೋಣ ವೇಣೂರು, ಜೂ. 8: ಮೂಡಬಿದಿರೆ ಪದವಿ ಆಳ್ವಾಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ವೇಣೂರು ಗ್ರಾ.ಪಂ. ಸಹಯೋಗದಲ್ಲಿ ಊರ ನಾಗರಿಕರ ಸಹಕಾರದೊಂದಿಗೆ ವೇಣೂರು ಫಲ್ಗುಣಿ ನದಿಯ ಮಹತ್ವ ಮತ್ತು ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮವು ಜೂ. 11ರಂದು ಬೆಳಿಗ್ಗೆ 8-30 ಗಂಟೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.ಊರ ನಾಗರಿಕರು, ಆಸಕ್ತ ಸಂಘ ಸಂಸ್ಥೆಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಳ್ವಾಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.
Read More »SSLC ಮರುಮೌಲ್ಯಮಾಪನ ಹೆಚ್ಚುವರಿ ಅಂಕ ಪಡೆದ ವೇಣೂರು ನವಚೇತನ ಶಾಲೆಯ ಮೂವರು ವಿದ್ಯಾರ್ಥಿನಿಯರು!
ವೇಣೂರು, ಜೂ. 6: ಇಲ್ಲಿಯ ನವಚೇತನ ಆಂಗ್ಲಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಮೂವರೂ ಹೆಚ್ಚುವರಿ ಅಂಕ ಗಳಿಸಿಕೊಂಡಿದ್ದಾರೆ. ಶಾಲೆಯಲ್ಲಿ ಟಾಪರ್ ಆಗಿದ್ದ ಸೊನಲ್ ರೇಗೋ 605 ಸೇರಿದಂತೆ ಚಿನ್ಮಯಿ 540 ಹಾಗೂ ಶಿಖಾ ಬಿ.ಎಸ್. 535 ಅಂಕ ಗಳಿಸಿದ್ದರು. ಇವರ ಉತ್ತರದ ಪ್ರತಿಯನ್ನು ಮರುಮೌಲ್ಯಮಾಪನಕ್ಕೆ ಕಳುಹಿಸಲಾಗಿತ್ತು. ಸೊನಾಲ್ ರೇಗೋ ಮರುಮೌಲ್ಯಮಾಪನದಲ್ಲಿ 7 ಅಂಕ ಪಡೆದುಕೊಂಡಿದ್ದು, 612 ಅಂಕ ಗಳಿಸಿ ಶಾಲೆಗೆ ಟಾಪರ್ ಎಣಿಸಿಕೊಂಡಿದ್ದಾರೆ. 540 ಅಂಕ ಗಳಿಸಿದ್ದ ಚಿನ್ಮಯಿ 546 ಹಾಗೂ 529 ಅಂಕ ಪಡೆದುಕೊಂಡಿದ್ದ ಶಿಖಾ ಬಿ.ಎಸ್. ಇದೀಗ …
Read More »ಉಪನ್ಯಾಸಕರ ಕೊರತೆಗೆ ಸರಕಾರ ಆಪರೇಷನ್ ದ.ಕ. ಜಿಲ್ಲೆಗೆ 240 ಅತಿಥಿ ಉಪನ್ಯಾಸಕರ ನೇಮಕಾತಿಗೆ ಆದೇಶ
ಬೆಂಗಳೂರು, ಜೂ. 5; ಕರ್ನಾಟಕ ಸರ್ಕಾರ 2023-24ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರುಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಆದೇಶ ಹೊರಡಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ 240 ಹಾಗೂ ಉಡುಪಿಗೆ 200 ಅತಿಥಿ ಉಪನ್ಯಾಸಕರ ನೇಮಕಾತಿಮಾಡಲಾಗಿದೆ. ಒಟ್ಟು 4055 ಹುದ್ದೆ ಭರ್ತಿ ಮಾಡಲಾಗುತ್ತಿದೆ. ಸರ್ಕಾರದ ಆದೇಶ ದಿನಾಂಕ ೦೨/೦೬/೨೦೨೩, ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಪತ್ರ ದಿನಾಂಕ ೧೯/೦೧/೨೦೨೩ ಮತ್ತು ಜಿಲ್ಲಾ ಉಪ ನಿರ್ದೇಶಕರಿಂದ ಬಂದ ವರದಿಗಳನ್ನು ಉಲ್ಲೇಖಿಸಿ ರಾಜ್ಯದ ಸರ್ಕಾರಿ …
Read More »ವಿ.ವಿ. ಪ್ರಸರಾಂಗ ಇಲಾಖೆಯ ಪ್ರಕಟಣಾ ಗೌರವಕ್ಕೆ ಪಾತ್ರವಾದ ಮಂಗಳೂರಿನ ಖ್ಯಾತ ಸಂಘಟಕ ಡಾ| ಎಂ. ಅಣ್ಣಯ್ಯ ಕುಲಾಲ್ MBBS ಪಡೆದ ವಿ.ವಿ.ಯಿಂದಲೇ ಸಾಧನೆಯ ಪುರಸ್ಕಾರ!
ಮಂಗಳೂರು, ಜೂ. 1: ಹಿಂದುಳಿದ ಸಮುದಾಯದ ಸಮಾಜಮುಖಿ ವೈದ್ಯ, ಶಿಕ್ಷಕ, ಸಂಘಟಕ, ಸಾಹಿತಿ ಹಾಗೂ ಅರಸು ಚಿಂತನೆಯ ಸಮಾಜ ವಿಜ್ಞಾನಿ ಮಂಗಳೂರಿನ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಹೆಸರನ್ನು ಮಂಗಳೂರು ವಿಶ್ವವಿದ್ಯಾನಿಲಯವು ಪ್ರಸರಾಂಗ ಇಲಾಖೆಯ ಮೂಲಕ ಪ್ರಕಟಿಸಿ ದಾಖಲಿಸಲು ವಿ.ವಿ.ಯ ಸಿಂಡಿಕೇಟ್ ತೀರ್ಮಾನಿಸಿದ್ದು, ಇದು ಹಿಂದುಳಿದ ವರ್ಗದ ಸಮಯದಾಯಕ್ಕೆ ಹೆಮ್ಮೆಯ ವಿಚಾರವಾಗಿದೆ.ಇತ್ತೀಚಿಗೆ ಜರಗಿದ ಮಂಗಳೂರು ವಿವಿಯ 43ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಮಾಜಮುಖಿ ಸಾಧಕರನ್ನು ಗುರುತಿಸಿ ಗೌರವಿಸಲಾಗಿತ್ತು. ಈ ಸಂದರ್ಭ ಡಾ. ಅಣ್ಣಯ್ಯ ಕುಲಾಲ್ ಅವರನ್ನೂ ಗುರುತಿಸಿ ಗೌರವಿಸಲಾಗಿತ್ತು. ಡಾ. ಅಣ್ಣಯ್ಯ ಕುಲಾಲ್ …
Read More »ಮೆಚ್ಚಲೇಬೇಕು ಧನ್ಯಶ್ರೀ ಕೆ. ಮನೋಜ್ ಶೆಟ್ಟಿ ಐತೇರಿ ದಂಪತಿ ಕಾರ್ಯ ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಐದು ಶಾಲೆಗಳಿಗೆ ನೋಟ್‌ಬುಕ್ ಕೊಡುಗೆ
ಆರಂಬೋಡಿ, ಮೇ 31: ಆರಂಬೋಡಿ ಗ್ರಾಮದಲ್ಲಿರುವ ಐದು ಸರಕಾರಿ ಶಾಲೆಗಳ ಮಕ್ಕಳಿಗೆ ಶ್ರೀಮತಿ ಧನ್ಯಶ್ರೀ ಕೆ. ಮನೋಜ್ ಶೆಟ್ಟಿ ಐತೇರಿ ಇವರು ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಉಚಿತ ನೋಟ್ ಪುಸ್ತಕ ವಿತರಿಸಿದರು.ಆರಂಬೋಡಿ ಗ್ರಾಮದ ಆರಂಬೋಡಿ, ಹೊಕ್ಕಾಡಿಗೋಳಿ, ಹನ್ನೆರಡುಕವಲು, ಪಿಲ್ಲಂಬುಗೋಳಿ, ಗುಂಡೂರಿ, ಮಂಚಕಲ್, ರಾಯಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಪ್ರತಿವರ್ಷ ಮನೋಜ್‌ರವರು ತಮ್ಮ ಪುತ್ರನಾದ ಜಸ್ಟೀಕ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಶಾಲೆಗಳಿಗೆ ಪುಸ್ತಕಗಳನ್ನು ನೀಡುತ್ತಾ ಬರುತ್ತಿದ್ದಾರೆ. ಮನೋಜ್ ಅವರ ಪರವಾಗಿ ಪ್ರದೀಪ್ ಅವರು ಪುಸ್ತಕಗಳ ವಿತರಣೆ ನೆರವೇರಿಸಿದರು.
Read More »ಪೆರಿಂಜೆ ಸಾರ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರಎಲ್ಲಾ ಸಮಸ್ಯೆಗಳಿಗೆ ವಿದ್ಯಾವಂತರಾಗುವುದೇ ಪರಿಹಾರ: ಎಚ್. ಮಹಮ್ಮದ್ ವೇಣೂರು
ಹೊಸಂಗಡಿ ಮೇ 15: ವಿದ್ಯಾವಂತರಾಗಿ ಬದುಕುಕಟ್ಟಿಕೊಂಡು ಮೂಲಕ ದೇಶಸೇವೆಯಲ್ಲಿ, ದೇಶದಪ್ರಗತಿಯಲ್ಲಿ ಅಳಿಲುಸೇವೆ ಮಾಡಬಹುದು. ಎಲ್ಲಾ ಸಮಸ್ಯೆಗಳಿಗೆ ವಿದ್ಯಾವಂತರಾಗುವುದೇ ಪರಿಹಾರ ಎಂದು ವೇಣೂರು ಪ್ರಾ.ಕೃ.ಪ.ಸ. ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಮಹಮ್ಮದ್ ವೇಣೂರು ಹೇಳಿದರು.ಪೆರಿಂಜೆ ಸಾರ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಪೆರಿಂಜೆ ಸಾರ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ಕುಟುಂಬದ ಹಿರಿಯರು ನಮ್ಮ ಆತ್ಮೀಯರು, ವಿದ್ಯೆಗೆ ಬಾರಿ ಮಹತ್ವನ್ನು ಕೊಟ್ಟವರು. ಕುಟುಂಬದ ಶ್ರೇಯಸ್ಸಿಗಾಗಿ ಮತ್ತು ಉನ್ನತ ವಿದ್ಯಾಭ್ಯಾಸ ಮಾಡಲು ಸಾರಾಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ಮೂಲಕ …
Read More »SSLC: ಹೋಬಳಿ ಮಟ್ಟದಲ್ಲಿ ದಾಖಲೆ ನಿರ್ಮಿಸಿದ ವೇಣೂರು! 9 ಶಾಲೆಗಳಿಗೆ ಶೇ. 100 ಫಲಿತಾಂಶ
ವೇಣೂರು: 2023ರ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು (ಸೋಮವಾರ, ಮೇ 8) ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಶೇಕಡಾ 83.89 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅಲ್ಲದೇ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೇಕಡಾ 86.74. ಫಲಿತಾಂಶ ಬಂದಿದ್ದರೆ, ಅನುದಾನ ರಹಿತ ಶಾಲೆಗಳಲ್ಲಿ ಶೇ.90.89 ಫಲಿತಾಂಶ ಬಂದಿದೆ. ಅನುದಾನಿತ ಶಾಲೆಯಲ್ಲಿ ಶೇ.85.64ರಷ್ಟು ಫಲಿತಾಂಶ ಬಂದಿದೆ. 14,983 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125ಕ್ಕೆ 125 …
Read More »