ರಾಜ್ಯ

ನೇಹಾ ಹತ್ಯೆ ಪ್ರಕರಣ : ಆರೋಪಿ ಫಯಾಜ್ ನನ್ನು 6 ದಿನ ‘CID’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಸಂಬಂಧ ಆರೋಪಿ ಫಯಾಜ್ ನನ್ನು ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಧಾರವಾಡ ಜೆಎಂಎಫ್ ಸಿ ಕೋರ್ಟ್ ಆರೋಪಿ ಫಯಾಜ್ ನನ್ನು ಆರು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಈಗಾಗಲೇ ರಾಜ್ಯ ಸರ್ಕಾರವು ನೇಹಾ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕೋರ್ಟ್ ಫಯಾಜ್ ನನ್ನು ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಸದ್ಯ ಧಾರವಾಡದ ಕೇಂದ್ರ ಕಾರಗೃಹದಲ್ಲಿರುವ ಫಯಾಜ್ ನನ್ನು ಇಂದು ಸಿಐಡಿ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ …

Read More »

ಬಿಜೆಪಿಯಿಂದ ಕೆಎಸ್‌ ಈಶ್ವರಪ್ಪ 6 ವರ್ಷಗಳ ಕಾಲ ಉಚ್ಛಾಟನೆ

ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಗನಿಗೆ ಟಿಕೆಟ್ ಕೈತಪ್ಪಿದ ನಂತರ ಬಂಡೆದ್ದಿರುವ ಕೆಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಬಿಜೆಪಿಗೆ ಮುಜುಗರ ತಂದಿತ್ತು. ಈಶ್ವರಪ್ಪ ಮನವೊಲಿಸಲು ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ನಾಯಕರು ಪ್ರಯತ್ನ ಮಾಡಿದ್ದರು. ಆದರೆ ಯಾವುದಕ್ಕೂ ಬಗ್ಗದ ಈಶ್ವರಪ್ಪ ಸ್ಪರ್ಧೆ ಮಾಡಿದ್ದಾರೆ.   ತಮ್ಮ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಭಾವಚಿತ್ರ ಬಳಸುವ ಮೂಲಕ ಬಿಜೆಪಿಗೆ ಮತ್ತಷ್ಟು ತಲೆನೋವು ತಂದಿದ್ದರು. …

Read More »

ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

ಯಾದಗಿರಿ: ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಫಯಾಜ್ ಎಂಬಾತ ಯಾದಗಿರಿ ನಗರದಲ್ಲಿ ದಲಿತ ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಯಾದಗಿರಿ ನಗರದ ಶಹಾಪುರಪೇಟೆಯ ಯುವಕ ರಾಕೇಶ್ (22) ಮೃತಪಟ್ಟ ಯುವಕ. ರವಿವಾರ ರಾತ್ರಿ ರಾಕೇಶ್ ರೊಟ್ಟಿ ಕೇಳಿದಕ್ಕೆ ನಡೆದ ಮಾತಿನ ಚಕಮಕಿಯಿಂದಾಗಿ ಫಯಾಜ್ ರಾಕೇಶನ ಮನೆಗೆ ನುಗ್ಗಿ ಮಲಗಿದ್ದ ಯುವಕನ ಗುಪ್ತಾಂಗಕ್ಕೆ ಒದ್ದು ಕೊಲೆ ಮಾಡಿದ್ದಾನೆ. ಪ್ರತಿ ನಿತ್ಯ ರಾಕೇಶ ಎಂಬಾತ ರೊಟ್ಟಿ ಕೇಂದ್ರಗಳಿಗೆ ಅಥವಾ ಅಕ್ಕ-ಪಕ್ಕದ ಮನೆಯಲ್ಲಿ ರೊಟ್ಟಿ ಕೇಳಿ ಪಡೆದು ಊಟ ಮಾಡುತ್ತಿದ್ದು, ರವಿವಾರ ರಾತ್ರಿ ಸಹ ರೊಟ್ಟಿ …

Read More »

ಭಟ್ಕಳ: ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ, 4 ಮೀನುಗಾರರ ರಕ್ಷಣೆ

ಭಟ್ಕಳ: ಕರಾವಳಿ ಜಿಲ್ಲೆ ಉತ್ತರ ಕನ್ನಡ ಭಾಗದಲ್ಲಿ ಅಬ್ಬರದ ಗಾಳಿ ಜೊತೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಈ ಮಧ್ಯೆ ಭಟ್ಕಳ ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ಗಾಳಿ ಮಳೆಗೆ ಈ ಮೀನುಗಾರಿಕಾ ಬೋಟ್  ಶನಿವಾರ ಬೆಳಗ್ಗೆ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.  ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ‘ಓಂ ಮಹಾಗಣಪತಿ’ ಹೆಸರಿನ ಬೋಟ್ ಮುಳುಗಡೆಯಾಗಿದೆ. ಬೋಟ್​ನಲ್ಲಿದ್ದ 4 ಮಂದಿ ಮೀನುಗಾರರ ರಕ್ಷಣೆ ಮಾಡಲಾಗಿದೆ. ಮುಳುಗಡೆಯಾಗಿರುವ ಬೋಟ್, ಮಹಾದೇವ ಖಾರ್ವಿ ಎಂಬವರಿಗೆ …

Read More »

ಸುಳ್ಯದಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ : ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಸುಳ್ಯ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡ ಘಟನೆ ಸುಳ್ಯ ಶ್ರೀರಾಮ್ ಪೇಟೆ ಬಳಿ ಇಂದು ನಡೆದಿದೆ. ಓಮ್ನಿ ಕಾರು ಹಾಗೂ ಸೆಲಾರಿಯೋ ಕಾರಿನ ನಡುವೆ ಶ್ರೀರಾಮ್ ಪೇಟೆ ಪೋಸ್ಟ್ ಆಫೀಸ್ ಕಚೇರಿಯ ಬಳಿ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ಎರಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕಾರುಗಳ ಡಿಕ್ಕಿಯಿಂದ ಸುಳ್ಯ ಮುಖ್ಯ ಬೀದಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೆ ತಡೆ ಉಂಟಾಯಿತು. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

Read More »

ಉಳ್ಳಾಲ ಬೀಚ್ ನಲ್ಲಿ ಮರಳಿನ‌ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ: ದಿನಾಂಕ 19-04-2024 ಉಳ್ಳಾಲ ಬೀಚ್ ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್, ಸೋಮೆಶ್ವರ ಪುರಸಭೆ ಸಹಭಾಗಿತ್ವದಲ್ಲಿ ಮರಳು ಆಕೃತಿ ಜತೆಗೆ ಮೇಣದ ಬತ್ತಿ ಬೆಳಗುವ ಮೂಲಕ ಮತದಾನ‌ ಜಾಗೃತಿ ಸಭೆ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನಶೆಟ್ಟಿ ಹಾಗೂ ಕೃಷ್ಣಪ್ಪ ಮೂಲ್ಯರು ನೆರೆದಿದ್ದವರಿಂದ ಮತದಾನ ಘೋಷಣೆ ಮೊಳಗಿಸಿದರು. ನಂತರ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್.ಕೆ ಐಎಎಸ್ ಅವರು ಬೆಲೂನ್ …

Read More »

ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿಷವುಣಿಸಿ ಕೊಂದ ತಾಯಿ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಅವಳಿ ಜವಳಿ ಮಕ್ಕಳ ಅನುಮಾನಾಸ್ಪದ ಸಾವಿಗೇ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಾಯಿ ಮಕ್ಕಳಿಗೆ ವಿಷವುಣಿಸಿ ಕೊಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ. ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು ಎಂದು ಹೇಳಲಾಗಿತ್ತು.ಬೀದಿ ಬದಿ ಮಾರಾಟಕ್ಕಿದ್ದ ಐಸ್‌ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು ಮೃತಪಟ್ಟಿದ್ದು ತಾಯಿ ಅಸ್ವಸ್ಥಗೊಂಡಿರುವ ಘಟನೆ ನಡೆದಿತ್ತು. ಆದರೆ ಪೊಲೀಸರ ವಿಚಾರಣೆಯ ವೇಳೆ ತಾಯಿ ಪೂಜಾ ನಾನೇ ವಿಷಯವುಣಿಸಿ ಕೊಂದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ …

Read More »

BREAKING : ಸ್ಯಾಂಡಲ್‌ವುಡ್‌ ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

ಬೆಂಗಳೂರು: ಹಿರಿಯ ನಟ ದ್ವಾರಕೀಶ್‌ (81) ವಿಧೀವಶರಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ದ್ವಾರಕೀಶ್ 1942ರ ಆಗಸ್ಟ್ 19ರಂದು ಜನಿಸಿದರು. ಅವರು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಬೆಳೆದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿಲಾಸ್ ಮತ್ತು ಬನುಮಯ್ಯ ಅವರ ಶಾಲೆಯಲ್ಲಿ ಪಡೆದರು ಮತ್ತು ಅವರು ಸಿಪಿಸಿ ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದರುಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದ್ವಾರಕೀಶ್ ಮತ್ತು ಅವರ ಸಹೋದರ ಮೈಸೂರಿನ ಗಾಂಧಿ ಚೌಕದಲ್ಲಿ “ಭಾರತ್ ಆಟೋ ಸ್ಪೇರ್ಸ್” ಎಂಬ ಆಟೋಮೋಟಿವ್ ಬಿಡಿಭಾಗಗಳ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ನಟನೆಯತ್ತ ಬಲವಾಗಿ ಆಕರ್ಷಿತರಾದರು ಮತ್ತು …

Read More »

ಮತದಾನದ ದಿನ ರಜೆ ನೀಡದೆ ಇದ್ದರೆ ಕ್ರಮ: ಮುಖ್ಯ ಚುನಾವಣಾಧಿಕಾರಿ

ಕರ್ನಾಟಕದಲ್ಲಿ ಏ.268 & ಮೇ 7ರಂದು ಮತದಾನ ನಡೆಯಲಿದ್ದು, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಎರಡೂ ದಿನ ಸರ್ಕಾರ ರಜೆ ಘೋಷಣೆ ಮಾಡಿದೆ. ಈ 2ದಿನದಂದು ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಾವು IT ವಲಯ ಸೇರಿ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿದ್ದು ಅಲ್ಲಿನ CEO ಮತ್ತು ಮ್ಯಾನೇಜ್‌ಮೆಂಟ್‌ಗಳನ್ನು ಭೇಟಿಯಾಗಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದರು

Read More »

ಮೋದಿ ಇರುವವರೆಗೂ ಸನಾತನ ಧರ್ಮದ ನಾಶ ಅಸಾಧ್ಯ-ನರೇಂದ್ರ ಮೋದಿ

ಮೈಸೂರು: ಎಲ್ಲಿಯವರೆಗೆ ಮೋದಿ ಇರುತ್ತಾರೋ ಅಲ್ಲಿಯವರೆಗೆ ಹಿಂದೂ ಧರ್ಮ ಹಾಗೂ ಸನಾತನ ಧರ್ಮದ ನಾಶ ಅಸಾಧ್ಯ. ಇದು ಕೂಡ ಮೋದಿ ಗ್ಯಾರಂಟಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮೈಸೂರು ನಗರದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಹೇಳಿದರು. ಮೈಸೂರು ಸಾಂಸ್ಕೃತಿಕ ರಾಜಧಾನಿ. ಇಲ್ಲಿನ ದಸರಾ ಇಡೀ ದೇಶಕ್ಕೆ ಪ್ರಖ್ಯಾತಿ. ತಾಯಿ ಚಾಮುಂಡಿ, ತಾಯಿ ಭುವನೇಶ್ವರಿ, ತಾಯಿ ಕಾವೇರಿ ಪಾದಕ್ಕೆ ನನ್ನ ಪ್ರಣಾಮಗಳು. ಸಂಸದೀಯ ಕ್ಷೇತ್ರದಲ್ಲಿ ದೇವೇಗೌಡರದ್ದು ಬಹಳ ದೊಡ್ಡ ಹೆಸರು. ಅವರಿಗೆ ನನ್ನ …

Read More »

You cannot copy content of this page.