Uncategorized

ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಪೋಕ್ಸೋ ಪ್ರಕರಣ ದಾಖಲು

ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಪ್ರೌಢಶಾಲಾ ಶಿಕ್ಷಕರೊಬ್ಬರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಿಜೂರು ಪ್ರೌಢ ಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ವಿರುದ್ದ ಪ್ರಕರಣ ದಾಖಲಾಗಿದೆ. ಸೆ. 26ರಂದು ವಿದ್ಯಾರ್ಥಿನಿ ಶಾಲೆಗೆ ಹೋಗಿ ಮನೆಗೆ ಬಂದವಳು ಇನ್ನು ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ. ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ಕೊಠಡಿಗೆ ಕರೆಸಿಕೊಂಡು ಟ್ಯೂಷನ್‌ಗೆ ಯಾಕೆ ಹೋಗುತ್ತೀಯಾ? ನಾನು ಹೇಳಿ ಕೊಟ್ಟಷ್ಟು ಹೇಳಿ ಕೊಡ್ತಾರಾ? ಅವರ ಮನೆಯ ಪಾತ್ರೆ …

Read More »

ಮಂಗಳೂರು:ಆನ್‌ಲೈನ್ ಮೂಲಕ 21.51 ಲಕ್ಷ ರೂ. ವಂಚನೆ: ದೂರು

ಮಂಗಳೂರು: ಟೆಲಿಗ್ರಾಂ ಆ್ಯಪ್‌ನಲ್ಲಿ ‘ಸ್ಟಾರ್ ರೇಟಿಂಗ್’ ಟಾಸ್ಕ್ ನೀಡಿ 21.51 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದಾಖಲಾಗಿವೆ. ನ.4ರಂದು ತನ್ನ ವಾಟ್ಸ್‌ಆಪ್ ಸಂಖ್ಯೆಗೆ +84334590184 ಸಂಖ್ಯೆಯಿಂದ ಬಂದ ಮೆಸೇಜ್‌ನ ಲಿಂಕ್ ತೆರೆದಾಗ ತನ್ನ ಸಂಖ್ಯೆ ಟೆಲಿಗ್ರಾಂ ಆ್ಯಪ್‌ಗೆ ಸೇರ್ಪಡೆಗೊಂಡಿತು. ಬಳಿಕ ತನಗೆ ಸ್ಟಾರ್ ರೇಟಿಂಗ್ ಆ್ಯಪ್ ಮೂಲಕ ಟಾಸ್ಕ್ ಪೂರ್ಣಗೊಳಿಸಿ ಹಣಗಳಿಸುವಂತೆ ಸೂಚಿಸಲಾಯಿತು. ಅದನ್ನು ನಂಬಿದ ತಾನು 5,000 ರೂ. ಸಂದಾಯ ಮಾಡಿದ್ದು, ಅದಕ್ಕೆ ಪ್ರತಿಯಾಗಿ ತನ್ನ ಖಾತೆಗೆ 6,500 ರೂ ಜಮೆಯಾಯಿತು. ಬಳಿಕ ಗ್ರೂಪ್ ಮರ್ಚೆಂಟ್ ಟಾಸ್ಕ್‌ ಪೂರ್ಣಗೊಳಿಸಲು …

Read More »

ಮಂಗಳೂರು: ಹಳಿ ಪರಿಶೀಲನೆ ವೇಳೆ ರೈಲು ಡಿಕ್ಕಿ – ಟ್ರ್ಯಾಕ್‌ಮನ್‌ ಮೃತ್ಯು

ಮಂಗಳೂರು: ರೈಲು ಹಳಿ ತಪಾಸಣೆ ನಡೆಸುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಟ್ರ್ಯಾಕ್‌ಮನ್ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೃತರನ್ನು ಆಂಧ್ರಪ್ರದೇಶದ ನವೀನ್ (26) ಎಂದು ಗುರುತಿಸಲಾಗಿದೆ. ಜಿಲ್ಲೆಯ ಬಂದ್ಯೋಡು ಮುಟ್ಟಂನಿಂದ ಶಿರಿಯ ತನಕ ರೈಲ್ವೇ ಹಳಿ ತಪಾಸಣೆ ಕಾರ್ಯ ನವೀನ್‌ಗೆ ವಹಿಸಲಾಗಿತ್ತು. ಸೇತುವೆ ಸಮೀಪ ತಪಾಸಣೆಗೆ ನಡೆಸುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಚೆನೈ ಸೂಪರ್ ಫಾಸ್ಟ್ ರೈಲು ಡಿಕ್ಕಿಯಾಗಿದೆ. ಕೆಲ ಸಮಯದ ಹಿಂದೆಯಷ್ಟೇ ನವೀನ್ ರೈಲ್ವೆ ಕೆಲಸಕ್ಕೆ ಸೇರಿದ್ದರು. ರೈಲ್ವೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ …

Read More »

ಉಜಿರೆ: ವಿವಾಹಿತ ಮಹಿಳೆಯ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

ಉಜಿರೆ: ವಿವಾಹಿತ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದ್ದು ಕೊಲೆ ಮಾಡಿ ಬಾವಿಗೆ ಹಾಕಿರುವ ಆರೋಪ ಕೇಳಿಬರುತ್ತಿದೆ. ಬೆಳಾಲು ಮತ್ತು ಉಜಿರೆ ಗ್ರಾಮದ ಗಡಿ ಪ್ರದೇಶ ಮಾಚಾರು ಸಮೀಪ ಕೆಂಪನೊಟ್ಟುವಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮಾಚಾರು ನಿವಾಸಿ ಶಶಿಕಲಾ ಅವರ ಶವ ಬಾವಿಯಲ್ಲಿ ಇದ್ದು, ಇದು ಆಕಸ್ಮಿಕ ಘಟನೆಯೇ, ಅಥವಾ ಕೊಲೆಯೇ ಎಂಬ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರು ಹಾಗೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Read More »

ಪುತ್ತೂರು: ಅನಾರೋಗ್ಯದಿಂದ ವಿದ್ಯಾರ್ಥಿ ಸಾವು..!

ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ, ಸೊರಕೆ ಸಮೀಪ ಪೆರಂಟೋಳು ನಿವಾಸಿ ಸುಪ್ರೀತ್‌(13) ಅವರು ದಿಢೀರ್‌ ಅನಾರೋಗ್ಯದಿಂದ ನ. 1ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಸುಪ್ರೀತ್‌ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ. ಸುಪ್ರೀತ್‌ ಅವರು ಮುಂಡೂರು ಗ್ರಾ.ಪಂ.ನ ಮಾಜಿ ಸದಸ್ಯೆ ಕುಸುಮಾ ಪೆರಂಟೋಳು ಮತ್ತು ಕುಂಞ ಮೇಸ್ತ್ರಿ ಅವರ ಪುತ್ರ. ಅವರು ಇಬ್ಬರು ಸಹೋದರರನ್ನು …

Read More »

ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಬಸ್ ಚಾಲನೆ ಮಾಡಿದ ಚಾಲಕ- ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಮುಂಬೈ:ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್‌ಆರ್‌ಟಿಸಿ) ಬಸ್ ಚಾಲಕ ಮಳೆಯ ಸಮಯದಲ್ಲಿ ವಾಹನದ ಮೇಲ್ಛಾವಣಿ ಸೋರಿಕೆಯಾಗಿದ್ದರಿಂದ ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಚಾಲನೆ ಮಾಡುತ್ತಿದ್ದ. ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   ವೀಡಿಯೊದಲ್ಲಿ, ಚಾಲಕನು ತನ್ನ ಎಡಗೈಯಲ್ಲಿ ಹಳದಿ ಛತ್ರಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಚಾಲನೆ ಮಾಡುವಾಗ ವಾಹನದ ಮೇಲ್ಛಾವಣಿಯು ಮಳೆಯಲ್ಲಿ ಸೋರಿಕೆಯಾಗಿರುವುದನ್ನು ಕಾಣಬಹುದು. ಬಸ್ಸಿನ ನಂಬರ್ ಪ್ಲೇಟ್ ಮತ್ತು ವಿಡಿಯೋದಲ್ಲಿ ಕಂಡುಬರುವ ಚಾಲಕನ ಮುಖ ಸ್ಪಷ್ಟವಾಗಿ ಗೋಚರಿಸದ ಕಾರಣ ಚಾಲಕನನ್ನು ಗುರುತಿಸುವುದು ಕಷ್ಟಕರವಾಗಿದೆ …

Read More »

 ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ..!

ಬೆಂಗಳೂರು : ಸಂಬಂಧಿಕರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತಪಟ್ಟ ಸ್ಪಂದನ ಅವರ ಮೃತ ದೇಹವನ್ನ ನಿನ್ನೆ ಬೆಂಗಳೂರಿಗೆ ತರಲಾಗಿತ್ತು. ಇಂದು ಬೆಂಗಳೂರಿನ ಶ್ರೀರಾಂಪುರದ ಹರೀಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅವರು ಪಂಚಭೂತಗಳಲ್ಲಿ ಲೀನವಾದರು.   ಶ್ರೀರಾಮಪುರದ ಹರೀಶ್ಚಂದ್ರ ಘಾಟ್ ವರೆಗೆ ಸ್ಪಂದನ ಅವರ ಅಂತಿಮ ಯಾತ್ರೆ ಆಗಮಿಸಿದ ನಂತರ ಈ ವೇಳೆ ಪುತ್ರ ಶೌರ್ಯ ವಿಧಿ ವಿಧಾನಗಳ ಪ್ರಕಾರ ಮಡಿಕೆಯನ್ನು ಹೊತ್ತು ಅವರ ತಾಯಿಯ ಮೃತದೇಹದ ಸುತ್ತ ಮೂರು ಸುತ್ತು ಹಾಕಿದ. …

Read More »

ಕುಂದಾಪುರ: ನಾಪತ್ತೆಯಾಗಿದ್ದ ಜಡ್ಕಲ್ ಯುವಕ ವಾರದ ಬಳಿಕ ಶವವಾಗಿ ಪತ್ತೆ

ಕುಂದಾಪುರ: ಕಳೆದ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಕೊಳಕೆಹೊಳೆ ಮೆಕ್ಕೆ ನಿವಾಸಿ ಮಂಜ ಎಂಬುವರ ಮಗ ಸುರೇಶ (28) ಶವವಾಗಿ ಪತ್ತೆಯಾಗಿದ್ದಾನೆ. ಶನಿವಾರ ಸಂಜೆ ಜಡ್ಕಲ್ ಸಮೀಪದ ಹಯ್ಯಂಗಾರ್ ಎಂಬಲ್ಲಿ ಹಾಸ್ಕಲ್ ಸಮೀಪದ ಹೊಳೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಸುರೇಶನಿಗೆ ಆಗಾಗ ಮನೆ ಸಮೀಪವೇ ಹರಿಯುವ ಹೊಳೆ ಬದಿಯಲ್ಲಿ ಬಂದು ಗಂಟೆಗಟ್ಟಲೆ ಕುಳಿತುಕೊಂಡು ಹೊಳೆಯನ್ನೇ ದಿಟ್ಟಿಸಿ ನೋಡುವ ಕೆಟ್ಟ ಅಭ್ಯಾಸವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆಯೂ ಎದ್ದು ಹಾಗೇ ಕುಳಿತಿರಬಹುದು ಎನ್ನಲಾಗಿದ್ದು, ವಿಪರೀತ ಮಳೆಯೂ ಇದ್ದಿದ್ದರಿಂದ ಹೊಳೆಗೆ …

Read More »

ಅಣ್ಣನನ್ನು ಕೊಂದವರ ಜೈಲಿಗಟ್ಟಲು ಕಷ್ಟಪಟ್ಟು ಓದಿ ವಕೀಲನಾಗಿ ಕೇಸ್ ಗೆದ್ದ ಸಹೋದರ

ಮುಂಬೈ : ತನ್ನ ಅಣ್ಣನನ್ನು ಕೊಂದವರನ್ನು ಜೈಲಿಗಟ್ಟಲು, ನ್ಯಾಯದ ಪರವಾಗಿ ಹೋರಾಟ ಮಾಡಲು ತನ್ನ ಜೀವನವನ್ನೇ ಮುಡುಪಾಗಿಟ್ಟ ಯುಕನೊಬ್ಬನ ಕಥೆ ವೈರಲ್ ಆಗಿದೆ. ಜೊತೆಗೆ ಅಣ್ಣನ ಕೊಂದವರ ಜೈಲಿಗಟ್ಟಲು ವಕೀಲನಾಗಿ, ಕೇಸ್ ಕೂಡ ಆ ಸಹೋದರ ಗೆದ್ದಿದ್ದಾನೆ. 2011ರಲ್ಲಿ ಮುಂಬೈನ ಅಂಧೇರಿಯ ಅಂಬೋಲಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕೀನನ್ ಮತ್ತು ರುಬೆನ್ ಎಂಬ ಯುವಕರು ಪಾರ್ಟಿ ಮಾಡಿ, ಮನೆಗೆ ತೆರಳುವಾಗ ಕೆಲವು ಮಂದಿ ಕಿಚಾಯಿಸಿದ್ದರು. ಇದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿದ್ದರು. ಈ ವೇಳೆ ಹಲ್ಲೆ ನಡೆದು ಕೀನನ್ ಮತ್ತು ರುಬೆನ್ ಮೃತಪಟ್ಟಿದ್ದರು. …

Read More »

ಟ್ರಕ್ಕಿಂಗ್ ಗೆ ತೆರಳಿದ್ದ 27 ವರ್ಷದ ಯುವಕ ದಾರಿ ಮಧ್ಯೆ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು: ಟ್ರಕ್ಕಿಂಗ್ ಗೆ ಹೋಗಿದ್ದ 27 ವರ್ಷದ ಯುವಕನೋರ್ವ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 27 ವರ್ಷ ವಯಸ್ಸಿನ ರಕ್ಷಿತ್ ಎಂಬ ಯುವಕ ಸಾವನ್ನಪ್ಪಿದ ಯುವಕನಾಗಿದ್ದಾನೆ. ಮೈಸೂರು ಮೂಲದ ಏಳು ಯುವಕರ ತಂಡ ಟ್ರಕ್ಕಿಂಗ್ ಆಗಮಿಸಿದ್ದರು. ಗೆಳೆಯರ ಜೊತೆಗೆ ಟ್ರಕ್ಕಿಂಗ್ ನಲ್ಲಿ ಲವಲವಿಕೆಯಿಂದ ತೆರಳಿದ್ದ ರಕ್ಷಿತ್ ಕುದುರೆಮುಖದಿಂದ–ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿದ್ದ. ಆದ್ರೆ ಚಿಕ್ಕಮಗಳೂರು—ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ …

Read More »

You cannot copy content of this page.