ರಾಷ್ಟ್ರೀಯ ಸುದ್ದಿ

ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಗೆಲುವಿನತ್ತ ಬಿಜೆಪಿ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಭರವಸೆ ಮಾತ್ರ ದೇಶದಲ್ಲಿ ಕೆಲಸ ಮಾಡುತ್ತದೆ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ನಾಯಕರು ಪ್ರಧಾನಿಯನ್ನು ಶ್ಲಾಘಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.   ಕಾಂಗ್ರೆಸ್ ನೀಡಿದ ಭರವಸೆಗಳಿಗೆ ಪ್ರತೀಕಾರವಾಗಿ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ರಚಿಸಿದ ‘ಮೋದಿಯ ಗ್ಯಾರಂಟಿ’ ಅನ್ನು ಬಿಜೆಪಿ ನಾಯಕರು ಶ್ಲಾಘಿಸಿದರು. ಮಧ್ಯಪ್ರದೇಶ, ರಾಜಸ್ಥಾನ, …

Read More »

ಕಂಠಪೂರ್ತಿ ಕುಡಿದು ರೈಲ್ವೇ ಹಳಿ ಮೇಲೆ ಟ್ರಕ್ ನಿಲ್ಲಿಸಿದ ವ್ಯಕ್ತಿಯ ಬಂಧನ

ದೆಹಲಿ: ವ್ಯಕ್ತಿಯೊಬ್ಬ ಮಧ್ಯದ ಅಮಲಿನಲ್ಲಿ ಕಂಠಪೂರ್ತಿ ಕುಡಿದು ರೈಲ್ವೇ ಹಳಿಮೇಲೆ ಟ್ರಕ್ ನಿಲ್ಲಿಸಿದ್ದು ದೊಡ್ಡ ಅಪಘಾತವೊಂದು ಲೋಕೋ ಪೈಲಟ್ ನ ಸಮಯ ಪ್ರಜ್ಞೆಯಿಂದ ತಪ್ಪಿದೆ. ಅಧಿಕಾರಿಗಳು ತಿಳಿಸಿದ ಮಾಹಿತಿ ಮೇರೆಗೆ ಟ್ರಕ್​ ಕಂಡು ರೈಲನ್ನು ನಿಧಾನಗೊಳಿಸಿದ್ದರು, ಮತ್ತು ಟ್ರಕ್​ನಿಂದ ಕೆಲವು ಮೀಟರ್​ ದೂರದಲ್ಲೇ ರೈಲನ್ನು ನಿಲ್ಲಿಸಿ, ಅಪಘಾತವನ್ನು ತಪ್ಪಿಸಿದ್ದಾರೆ. ದೆಹಲಿಯ ಲುಧಿಯಾನ ರೈಲ್ವೇ ಹಳಿಯಲ್ಲಿ ಟ್ರಕ್ ಚಲಾಯಿಸಿದ್ದಾನೆ, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಟ್ರ್ಯಾಕ್‌ನಲ್ಲಿ ಟ್ರಕ್ ಅನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸಿಂಗ್ ಹೇಳಿದರು. ರೈಲು ನಿಂತ ಬಳಿಕ …

Read More »

ಕಾಂಗ್ರೆಸ್‌ನಿಂದ ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ ರೂ. ಗ್ಯಾರಂಟಿ

ತೆಲಂಗಾಣ: ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ೫ ಗ್ಯಾರಂಟಿ ಘೋಷಿಸಿ ಭರ್ಜರಿ ಗೆಲುವು ಸಾಧಿಸಿ ಬಿಜೆಪಿಗೆ ಶಾಕ್ ನೀಡಿದ್ದ ಕಾಂಗ್ರೆಸ್ ಈಗ ಮತ್ತೊಂದು ಭರ್ಜರಿ ತಂತ್ರ ರೂಪಿಸಿದೆ. ಈ ಸಲ ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ ಗ್ಯಾರಂಟಿ ಘೋಷಿಸಿದೆ. ಮಾತ್ರವಲ್ಲ ಗೃಹಿಣಿಯರ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಎನ್ನುವ ಘೋಷಣೆಯನ್ನೂ ಘೋಷಿಸಿದೆ. ಅಂದ ಹಾಗೆ ಈ ಘೋಷಣೆಯನ್ನೆಲ್ಲ ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲೂ ಪ್ರಯೋಗಿಸುತ್ತಿದೆ. ತೆಲಂಗಾಣಕ್ಕೆ ಆರು ಗ್ಯಾರಂಟಿ’ಗಳನ್ನು ಘೋಷಿಸಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ನೀಡಿದ್ದ ಭರವಸೆಗಳನ್ನು ಯಶಸ್ವಿಯಾಗಿ ಜಾರಿಗೆ …

Read More »

ಸ್ವಚ್ಛ & ಸ್ವಸ್ತ್ ಭಾರತ್ʼ: ಸ್ವಚ್ಛತಾ ಅಭಿಯಾನದಲ್ಲಿ ಭಾಗಿ, ಕಸ ಗುಡಿಸಿ ಎಲ್ಲರಿಗೂ ಮಾದರಿಯಾದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆ ಮತ್ತು ಯೋಗಕ್ಷೇಮದ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ, ಕುಸ್ತಿಪಟು ಮತ್ತು ಫಿಟ್‌ನೆಸ್ ಪ್ರಭಾವಿ ಅಂಕಿತ್ ಬೈಯನ್‌ಪುರಿಯಾ ಅವರೊಂದಿಗೆ ಸ್ವಚ್ಛ ಭಾರತ್ ಮಿಷನ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಪಿಎಂ ಮೋದಿ ಅವರು ಸ್ವಚ್ಛತೆ, ಫಿಟ್‌ನೆಸ್ ಮತ್ತು ಯೋಗಕ್ಷೇಮದ ಮಿಶ್ರಣವನ್ನು ಒತ್ತಿಹೇಳಿದರು. ಇದು ‘ಸ್ವಚ್ಛ ಮತ್ತು ಸ್ವಸ್ತ್ ಭಾರತ’ದ ಸಾರವನ್ನು ಸಾರುತ್ತದೆ. ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಲ್ಲಿ ಒಗ್ಗೂಡಿ ಸ್ವಚ್ಛತೆಗಾಗಿ ಪ್ರಧಾನಿ ಮೋದಿಯವರ ಕರೆಗೆ ರಾಷ್ಟ್ರವ್ಯಾಪಿ ರಾಜಕೀಯ ಮುಖಂಡರು ಒಟ್ಟುಗೂಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ನ …

Read More »

BIGG NEWS: ಇಂದೇ ಸಂಸತ್ತಿನಲ್ಲಿ ಮಂಡನೆಯಾಗಲಿದೆ ಮಹಿಳಾ ಮೀಸಲಾತಿ ಮಸೂದೆ

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಮಸೂದೆಯನ್ನು ಸದನದಲ್ಲಿ ಅಂಗೀಕರಿಸುವ ಚರ್ಚೆಯನ್ನು ಸೆಪ್ಟೆಂಬರ್ 21 ರಂದು ಕೈಗೆತ್ತಿಕೊಳ್ಳಲಾಗುವುದು ಎನ್ನಲಾಗಿದೆ. ಸೋಮವಾರದಿಂದ ಪ್ರಾರಂಭವಾಗಿರುವ ಐದು ದಿನಗಳ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಆಡಳಿತಾರೂಢ ಎನ್ಡಿಎ ಮತ್ತು ಪ್ರತಿಪಕ್ಷ ಬಿಜೆಪಿ ಬಣ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಭಾನುವಾರ ಬಲವಾದ ಧ್ವನಿ ಎತ್ತಿದ್ದವು , “ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಸರ್ಕಾರ ಹೇಳಿತ್ತು ಅದರಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ …

Read More »

ಪತ್ನಿಯ ಹುಟ್ಟುಹಬ್ಬಕ್ಕೆ ಚಂದ್ರನ ಮೇಲಿನ ಜಾಗವನ್ನು ಉಡುಗೊರೆಯಾಗಿ ನೀಡಿದ ಪತಿ

ಕೋಲ್ಕತ್ತಾ: ಭಾರತ ಚಂದ್ರಯಾನ-3 ಯಶಸ್ಸಿನ ಬಳಿಕ ಬಾಹ್ಯಾಕಾಶ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಇಲ್ಲೊಬ್ಬರು ಚಂದ್ರನ ಮೇಲಿನ ತುಂಡು ಜಾಗವನ್ನು ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.! ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯ ಸಂಜಯ್ ಮಹತೋ ಎಂಬ ವ್ಯಕ್ತಿ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಚಂದ್ರನ ಮೇಲಿನ ತುಂಡು ಜಾಗವನ್ನು ಉಡುಗೊರೆಯಾಗಿ ನೀಡಿದ್ದಾರೆ. “ಮದುವೆಯ ವೇಳೆ ನಾನು ಪತ್ನಿಗೆ ಚಂದ್ರನನ್ನು ತಂದುಕೊಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಈ ಮಾತು ಕೊಟ್ಟ ದಿನದಿಂದ ಅದನ್ನು ಪೂರ್ಣ ಮಾಡದೆ ಸುಮ್ಮನೆ ಇರಲು ನನಗೆ ಆಗುತ್ತಿರಲಿಲ್ಲ. ಈಗ ಮದುವೆಯ ಬಳಿಕ ಅವರ …

Read More »

ಮಗಳ ಅಂತ್ಯಸಂಸ್ಕಾರದ ನಂತರ ತಂದೆಗೆ ಶಾಕ್ – ನಾನಿನ್ನೂ ಬದುಕಿದ್ದೇನೆ ಅಪ್ಪಾ ಎಂದು ಕರೆ ಮಾಡಿದ ಪುತ್ರಿ

ಪಾಟ್ನಾ: ಬಿಹಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಗಳ ಅಂತ್ಯಸಂಸ್ಕಾರದ ಬಳಿಕ ಸ್ವತಃ ಮಗಳೇ ವಿಡಿಯೋ ಕಾಲ ಮಾಡಿ ‘ಅಪ್ಪಾ ನಾನಿನ್ನೂ ಬದುಕಿದ್ದೇನೆ’ ಎಂದು ಹೇಳಿದ್ದಾಳೆ. ಬಿಹಾರದ ಪುರ್ನಿಯಾದ ಅಕ್ಬರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಂಶು ಕುಮಾರಿ ಎಂಬ ಯುವತಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಪೊಲೀಸರು ಎಲ್ಲೆಡೆ ಹುಡುಕಾಡಿದ್ದರೂ ಅಂಶು ಕುಮಾರಿಯ ಪತ್ತೆಯೇ ಇರಲಿಲ್ಲ. ಕೆಲವು ದಿನಗಳ ಹಿಂದೆ ಕಾಲುವೆ ಒಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮುಖವು ಗುರುತಿಸಲಾಗದಷ್ಟು ಉಬ್ಬಿಕೊಂಡಿತ್ತು. ಅದು ಕಾಣೆಯಾದ ಅಂಶು ಕುಮಾರಿಯದ್ದೇ ದೇಹ ಎಂದು …

Read More »

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ರೇ ಗಲ್ಲು, ಗ್ಯಾಂಗ್ ರೇಪ್ ಮಾಡಿದವರಿಗೆ 20 ವರ್ಷ ಶಿಕ್ಷೆ – ಅಮಿತ್ ಶಾ

ನವದೆಹಲಿ: ಕೇಂದ್ರ ಸರ್ಕಾರದಿಂದ ದೇಶದಲ್ಲಿನ ಗ್ಯಾಂಗ್ ರೇಪ್ ನಂತಹ ಪ್ರಕರಣ ತಡೆಗಟ್ಟೋದಕ್ಕಾಗಿ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ. ಈ ನಿಟ್ಟಿನಲ್ಲಿ ಲೋಕಸಭೆಯಲ್ಲಿ ತಿದ್ದುಪಡಿ ಮಸೂಧೆಯನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ. ಈ ತಿದ್ದುಪಡಿ ಮಸೂದೆಯಂತೆ ಇನ್ಮುಂದೆ ಗ್ಯಾಂಗ್ ರೇಪ್ ಮಾಡಿದವರಿಗೆ 20 ವರ್ಷ ಶಿಕ್ಷೆ ವಿಧಿಸುವಂತ ಕಾನೂನು ಜಾರಿಯಾಗಲಿದೆ.   ಈ ಸಂಬಂಧ ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ನಾನು …

Read More »

ಮಗನ ಅಂತಿಮ ದರ್ಶನಕ್ಕೆ ಬಿಡದ ಅಧಿಕಾರಿಗಳು- ತಂದೆ ಸಾವು

ಚಂಡೀಗಢ: ವಿದ್ಯುತ್ ಅವಘಡದಿಂದ ಮೃತಪಟ್ಟ ಮಗನ ಅಂತಿಮ ದರ್ಶನಕ್ಕೆ ಅವಕಾಶ ನೀಡ ಜಿಎಸ್‌ಟಿ ಅಧಿಕಾರಿಗಳು ತಂದೆಯ ಸಾವಿಗೆ ಕಾರಣರಾಗಿದ್ದಾರೆ! ಬಲ್‌ಬೀರ್ ಸಿಂಗ್ ಎಂಬಾತರೇ ಮೃತಪಟ್ಟ ದುರ್ದೈವಿ. ಟ್ರಕ್ ಚಾಲಕರಾದ ಇವರು ಸರಕುಗಳನ್ನು ತಲುಪಿಸಲು ಕಾನ್‌ಪುರ ನಗರಕ್ಕೆ ತೆರಳಿದ್ದಾರೆ. ವಾಪಸ್ ಬರುವಾಗ ಅವರ ಮಗ ಮಹೇಶ್ ಎಂಬಾತ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಸುದ್ದಿ ಬಂದಿದೆ. ಸುದ್ದಿ ತಿಳಿದು ಕೂಡಲೇ ಅವರು ತಮ್ಮ ಊರು ಪಂಜಾಬ್‌ನ ಲೂಧಿಯಾನ ಸಮೀಪದ ಅಸ್ಲಾಮ್‌ಗಂಜ್‌ಗೆ ತೆರಳಲು ಮುಂದಾಗಿದ್ದಾರೆ. ಆದರೆ ಇದೇ ವೇಳೆ ಅವರನ್ನು ಟ್ರಕ್ ಸಮೇತ ತಡೆದ ರಾಜ್ಯ ಜಿಎಸ್‌ಟಿ ಅಧಿಕಾರಿಗಳು …

Read More »

ಅಸ್ವಸ್ಥಳಾಗಿದ್ರೂ ಎಕ್ಸಾಂ ಬರೆಸಿದ ಶಾಲೆ ಶಿಕ್ಷಕರು: ಮರುದಿನ ಬಾಲಕಿ ಸಾವು

ಫರಿದಾಬಾದ್: ಹರ್ಯಾಣದ ಫರಿದಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅಸ್ವಸ್ಥಳಾಗಿದ್ದರೂ ಪರೀಕ್ಷೆಗಾಗಿ ಶಾಲೆಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ ಮರುದಿನದ ನಂತರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾಲಕಿಯನ್ನು 11 ವರ್ಷದ ಆರಾಧ್ಯ ಖಂಡೇಲ್ವಾಲ್ ಎಂದು ಗುರುತಿಸಲಾಗಿದ್ದು, ಫರಿದಾಬಾದ್‌ನ ಸಿಬಿಎಸ್‌ಇ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಜುಲೈ 13 ರಂದು ಆಕೆ ಸಾವನ್ನಪ್ಪಿದ್ದಾಳೆ. ಜುಲೈ 12 ರಂದು ಶಾಲೆಯಲ್ಲಿ ಆರೋಗ್ಯ ಸರಿಯಿಲ್ಲ ಎಂದು ತನ್ನ ತರಗತಿಯ ಶಿಕ್ಷಕರಿಗೆ ತಿಳಿಸಿದ್ದರೂ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಶಾಲೆಯು ಎಕ್ಲಸಾಂ ಬರೆಸಿದೆ ಎಂದು ಆರಾಧ್ಯ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಆರಾಧ್ಯ ಸಹಪಾಠಿಯ …

Read More »

You cannot copy content of this page.