

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ನಗರದ ಕಿನ್ನಿಮೂಲ್ಕಿ ಸಮೀಪದ ಗೋವಿಂದ ಕಲ್ಯಾಣ ಮಂಟಪ ಮುಂಬಾಗದ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಹಿರಿಯ ನಾಗರಿಕರೊಬ್ಬರು ಆಲ್ಟೋ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ವೃದ್ಧರು ಕಾರಿನಿಂದ ಇಳಿದಿದ್ದಾರೆ. ಪರಿಸರದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸಮೀಪದಲ್ಲಿರುವ ಅಗ್ನಿಶಾಮಕ ದಳದ ವಾಹನ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಇದರಿಂದ ಸಂಭಾವ್ಯ ಅಪಾಯ ತಪ್ಪಿದೆ.