![WhatsApp Image 2024-09-24 at 5.43.17 PM](https://i0.wp.com/thrishulnews.com/wp-content/uploads/2024/09/WhatsApp-Image-2024-09-24-at-5.43.17-PM.jpeg?fit=768%2C562&ssl=1?v=1727180012)
![](https://i0.wp.com/thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg?fit=1050%2C600&ssl=1)
ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಕಾರಿಗೆ ಬಸ್ಸು ಡಿಕ್ಕಿಯಾದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಭಟ್ಕಳ ಮೂಸಾ ನಗರದ ನಿವಾಸಿ ದಿವಂಗತ ಅಬೂಬಕರ್ ಸಿದ್ದೀಕ್ವಾ ಅವರ ಪುತ್ರ ಮೊಹಮ್ಮದ್ ನಾಸಿರ್ ಸಿದ್ದೀಕ್ವಾ (ಘಾಟಿ) ಎಂಬುವರು ಮೃತಪಟ್ಟಿದ್ದಾರೆ. ಕುಟುಂಬದವರೊಂದಿಗೆ ಮಂಗಳೂರಿನಿಂದ ಭಟ್ಕಳಕ್ಕೆ ತೆರಳುತ್ತಿದ್ದ ವೇಳೆ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಸಮೀಪ ಬರುತ್ತಿದ್ದಾಗ ಕಾರಿನಲ್ಲಿ ಶಬ್ಧ ಕೀಳಿಸಿದ ಪರಿಣಾಮ ಚಾಲಕ ನಾಸೀರ್ ಕಾರನ್ನು ನಿಲ್ಲಿಸಿ ಪರೀಕ್ಷಿಸಿದ್ದಾರೆ. ನಂತರ ಅವರು ಕಾರಿಗೆ ಹತ್ತುವ ವೇಳೆ ಕುಂದಾಪುರದಿಂದ ಗಂಗೊಳ್ಳಿ ಕಡೆಗೆ ತೆರಳುತ್ತಿರುವ ಬಸ್ಸೊಂದು ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.