



ವೇಣೂರು, ಜೂ. 4: ಒರಿಸ್ಸಾ ರಾಜ್ಯದ ಬಹನಾಗದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ವೇಣೂರು ಸಹಿತ ದ.ಕ. ಜಿಲ್ಲೆಯ 21 ಮಂದಿ ಜನರು ಸಿಲುಕಿಕೊಂಡಿದ್ದರು. ಆದರೆ ಇದೀಗ ಯಾತ್ರಿಗಳು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ಕೊಲ್ಕತ್ತ ನಗರದಿಂದ ಸುಮೇದ್ ಸಿಖರ್ಜಿಗೆ ತಲುಪಿ ದೇವರ ದರ್ಶನ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವೇಣೂರಿನ ಮಮತಾ ಪ್ರಸಾದ್ ಜೈನ್, ಆಶಾಲತಾ ಜೈನ್ ಹಾಗೂ ದೀಪಾಶ್ರೀ ಕತ್ತೋಡಿ ಅಪಾಯದಿಂದ ಪಾರಾದವರು.

ದ.ಕ. ಜಿಲ್ಲೆಯ ವೇಣೂರು, ಮಂಗಳೂರು, ಉಜಿರೆ, ಧರ್ಮಸ್ಥಳದಿಂದ ಒಟ್ಟು 21 ಮಂದಿ, ಕಳಸ ತಾಲೂಕಿನ ಸಂಸೆ, ಹೊರನಾಡು, ಕುದುರೆಮುಖ ಗ್ರಾಮಗಳ ಜೈನ ಸಮುದಾಯದ ಒಟ್ಟು 110 ಜನ ಸದ್ಯ ಜಾರ್ಖಾಂಡ್‌ನ ಸುಮೇದ್ ಸಿಖರ್ಜಿ ಯಾತ್ರಾ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿದ್ದು, ೨೪ನೇ ಜೈನ ತೀರ್ಥಂಕರು ಮೋಕ್ಷ ಹೊಂದಿದ್ದ ಪುಣ್ಯ ಕ್ಷೇತ್ರದ ದರ್ಶನ ಪಡೆಯುತ್ತಿದ್ದೇವೆ ಎಂದು ವೇಣೂರಿನ ಯಾತ್ರಿ ದೀಪಾಶ್ರೀ ಕತ್ತೋಡಿ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್‌ನ ಡೆಸ್ಕ್‌ಗೆ ಮಾಹಿತಿ ನೀಡಿದ್ದಾರೆ.


ವೇಣೂರಿನ ಯಾತ್ರಿಗಳು ಮೇ 31ರಂದು ವೇಣೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟು, ಜೂ. 1ರಂದು ಬೆಳಿಗ್ಗೆ ಬೆಂಗಳೂರಿನಿಂದ ರೈಲಿನಲ್ಲಿ ಯಾತ್ರೆ ಮುಂದುವರಿಸಿದ್ದರು. ಇದೀಗ ಯಾತ್ರಾತ್ರಿಗಳು ಇನ್ನು ಜಾರ್ಖಂಡ್ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆಯಲಿದ್ದು, ಜೂ. 13ರವರೆಗೆ ಯಾತ್ರೆ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.
