ಉಡುಪಿ : ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ಅವತಾರ್ 2 ವೇಷಧಾರಿ ರವಿ ಕಟಪಾಡಿ ಅವರು ಕಟಪಾಡಿ, ಶಂಕರಪುರ, ಉದ್ಯಾವರ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಿದರು ಇಂದು ಉಡುಪಿಯಾದ್ಯಂತ ಸಂಚರಿಸುತ್ತಿದ್ದಾರೆ.
ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಇದುವರೆಗೆ 9 ವರ್ಷದಲ್ಲಿ 130 ಮಕ್ಕಳಿಗೆ 1ಕೋಟಿ 28ಲಕ್ಷ ರೂ.ವೈದ್ಯಕೀಯ ಸಹಾಯ ಹಸ್ತ ನೀಡಿ ವೆಚ್ಚ ಭರಿಸಿದ್ದರು. ಮಟ್ಟು ದಿನೇಶ್ ಇವರ ಅವತಾರಕ್ಕೆ ಬಣ್ಣ ಬಳಿದಿದ್ದು ಮನಮೋಹಕ ವೇಷ ಜನ ಮನ ಸೆಳೆಯುತ್ತಿದೆ.