ವಿಟ್ಲ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೇಪು ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಕೇಪು ಗ್ರಾಮದ ಗುತ್ತುದಡ್ಕ ನಿವಾಸಿ ಕೊರಗಪ್ಪ ನಾಯ್ಕರವರ ಪುತ್ರ ನವೀನ್ ನಾಯ್ಕ(35) ಎಂದು ಗುರುತಿಸಲಾಗಿದೆ. ನವೀನ್ ನಾಯ್ಕರವರು ತೆಂಗಿನಕಾಯಿ ತರಲು ತೋಟಕ್ಕೆ ತೆರಳಿದ ವೇಳೆ ಆಕಸ್ಮಿಕವಾಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.