ಮಂಗಳೂರಲ್ಲಿ ‘ಆಟೋ ರಿಕ್ಷಾ’ಗಳಿಗೆ ಹೊಸ ರೂಲ್ಸ್‌ : ಫೆ. 20ರೊಳಗೆ ‘ಕಲರ್‌ ಕೋಡ್‌’ ಬದಲಾವಣೆ ಆದೇಶ

ಕ್ಷಿಣಕನ್ನಡ : ಜಿಲ್ಲೆಯಾದ್ಯಂತ ಸಂಚರಿಸುವ ಆಟೋ ರಿಕ್ಷಾಗಳಿಗೆ ಹೊಸ ರೂಲ್ಸ್‌ ಜಾರಿಯಾಗಿದ್ದು, ಫೆ. 20ರೊಳಗೆ ರಿಕ್ಷಾ ಗಳ ಬಣ್ಣ ಬದಲಾಯಿಸಲು ಸೂಚನೆ ನೀಡಲಾಗಿದೆ.

ಎಲ್ಲ ವಿಧದ ಆಟೋ ರಿಕ್ಷಾಗಳಿಗೆ (ಇ-ಆಟೋ ರಿಕ್ಷಾಗಳು ಒಳಗೊಂಡಂತೆ) ಮೆಥನಾಲ್‌ ಮತ್ತು ಇಥನಾಲ್‌ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾ ಒಳಗೊಂಡಂತೆ ಆಟೋ ರಿಕ್ಷಾದ ಮಧ್ಯ ಭಾಗ ದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು.

ಆಟೋ ರಿಕ್ಷಾದ ಮಧ್ಯ ಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯಬೇಕು. ಇದು ವಲಯ 1 ಮತ್ತು ವಲಯ 2 ಕ್ಕೂ ಅನ್ವಯವಾಗುತ್ತದೆ.

ವಲಯ 1ಕ್ಕೆ ಚೌಕಾಕೃತಿ ಆಕಾರದ ಆಕಾಶ ನೀಲಿ ಬಣ್ಣ, ವಲಯ 2ಕ್ಕೆ ವೃತ್ತಾಕಾರದ ಹಳದಿ ಬಣ್ಣದ ಸ್ಟಿಕ್ಕರ್‌/ಗುರುತಿನ ಸಂಖ್ಯೆಯನ್ನು ಪೊಲೀಸ್‌ ಇಲಾಖಾ ವತಿಯಿಂದ ಪಡೆದು ಅಂಟಿಸಿಕೊಳ್ಳಬೇಕು. ಫೆ. 20 ಕೊನೆಯ ದಿನವಾಗಿದೆ ಎಂದು ಎಲ್ಲಾ ಆಟೋ ಚಾಲಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

Check Also

ಮಂಗಳೂರು: ಇಲಿ ಜ್ವರಕ್ಕೆ ಕಾಲೇಜು ವಿದ್ಯಾರ್ಥಿನಿ ಬಲಿ..!!

ಇಲಿ ಜ್ವರಕ್ಕೆ ಯುವತಿ ಸಾವನ್ನಪ್ಪಿದ ಘಟನೆ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿ …

Leave a Reply

Your email address will not be published. Required fields are marked *

You cannot copy content of this page.