

ಉಳ್ಳಾಲ ತಾ.ಪಂ/ ಮುನ್ನೂರು ಗ್ರಾ.ಪಂ: 74ನೇ ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಯೋಜನೆಯಡಿ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮದಕ ಕೆರೆ ದಂಡೆಯಲ್ಲಿ ಶ್ರೀಮತಿ ರಾಜೇಶ್ವರಿ ಉಪಾಧ್ಯಕ್ಷರು ಅವರು ಧ್ವಜಾರೋಹಣ ನೆರವೇರಿಸಿದರು.
ಇದೇ ವೇಳೆ ಇತ್ತೀಚೆಗಷ್ಟೇ ಮುನ್ನೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜಲ ಸಂರಕ್ಷಣೆಗೆ ಸಂಬಂಧಪಟ್ಟಂತೆ ಜಲಜೀವನ್ ಮಿಷನ್ ವತಿಯಿಂದ ಆಯೋಜಿಸಿದ್ದ ಜಲ ಸಂರಕ್ಷಣೆ ನಮ್ಮ ಹೊಣೆ ಕುರಿತ್ತಂತೆ ಕಿರುಕಥೆ ರಚನೆ ಹಾಗೂ ಜಲ ಸಂರಕ್ಷಣಾ ಮಾದರಿ ತಯಾರಿ ಕುರಿತ್ತಂತೆ ಸ್ಪರ್ಧೆ ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಈ ಸುಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಶ್ರೀ ವಿಲ್ರ್ಫೆಡ್ ಡಿಸೋಜಾ ಪಂಚಾಯತ್ ಅಧ್ಯಕ್ಷರು , ಶ್ರೀ ರವೀಂದ್ರ ರಾಜೀವ್ ನಾಯ್ಕ್ ಪಂಚಾಯತ್ ಅಭಿವೃದ್ದಿ ಅಧಿಕಾರಿ , ಶ್ರೀಮತಿ ನಿಶ್ಮಿತ. ಬಿ ತಾಲೂಕು ಪಂಚಾಯತ್ ಐಇಸಿ ಸಂಯೋಜಕರು, ಶ್ರೀಮತಿ ಬಬಿತಾ ಸುರೇಶ್ ಎಂಬಿಕೆ, ನಾಗರಾಜ್ ಮದೂರ್ ಸೇರಿದಂತೆ ಸ್ಥಳೀಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.