ವೇಣೂರು: ಮದುವೆ ನಿಗದಿಯಾಗಿದ್ದ ವಧು ನಾಪತ್ತೆಯಾಗಿ ಪ್ರಿಯಕರನೊಂದಿಗೆ ಮದುವೆಯಾಗಿ ಠಾಣೆಗೆ ಹಾಜರು!

ವೇಣೂರು, ಮೇ 31: ನಿಶ್ಚಿತಾರ್ಥವಾಗಿ ಮದುವೆ ನಿಗದಿಯಾಗಿದ್ದ ಅಂಡಿಂಜೆಯ ಯುವತಿಯೋರ್ವಳು ಪ್ರಿಯಕರನೊಂದಿಗೆ ಪರಾರಿಯಾಗಿ ಮದುವೆಯಾಗಿ ಠಾಣೆಗೆ ಹಾಜರಾದ ಘಟನೆ ನಡೆದಿದೆ.
ಅಂಡಿಂಜೆ ಗ್ರಾಮದ ಯುವತಿಗೆ ಬಂಟ್ವಾಳ ಕನ್ಯಾನ ಗ್ರಾಮದ ಯುವಕನೊಂದಿಗೆ ಮದುವೆ ನಿಗದಿಯಾಗಿದ್ದು, ನಾಳೆ ಅಂದರೆ ಜೂ. 1ರಂದು ಮದುವೆ ನೆರವೇರಬೇಕಿತ್ತು. ಆದರೆ ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ವಧು ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ವೇಣೂರು ಪೊಲೀಸರಿಗೆ ದೂರು ನೀಡಿದ್ದರು. ಅತ್ತ ಕರಿಮಣೇಲು ಗ್ರಾಮದ ಯುವಕನೂ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಯುವತಿ ಪ್ರೀತಿಸಿದ್ದ ಯುವಕನೊಂದಿಗೆ ಠಾಣೆಗೆ ಹಾಜರಾಗಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದು, ಪೊಲೀಸರು ದಂಪತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇಬ್ಬರೂ ವಯಸ್ಕರಾಗಿರುವ ಕಾರಣ ಪ್ರಕರಣ ಸುಖಾಂತ್ಯ ಕಂಡಿದೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.