

ಬೆಳ್ತಂಗಡಿ : ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಲಾಯಿಲ, ದಿಡುಪೆ, ನಡ,ಕಲ್ಮಂಜ, ಚಿಬಿದ್ರೆ, ಚಾರ್ಮಾಡಿ, ಕಡಿರುದ್ಯಾವರ ಮೊದಲಾದ ಗ್ರಾಮಗಳ ಜನತೆಗೆ ಮಂಗಳವಾರ ಸುರಿದ ಸಾಮಾನ್ಯ ಮಳೆ ಒಂದಿಷ್ಟು ತಂಪೆರಯಿತು.
ಸಂಜೆ 5ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಸಾಮಾನ್ಯವಾಗಿ ಸುರಿಯಿತು.ಉಳಿದ ಕೆಲವು ಗ್ರಾಮಗಳಲ್ಲಿ ತುಂತುರು ಮಳೆ ಸುರಿದಿದೆ.
ಏ.7ರಂದು ತಾಲೂಕಿನ ಹಲವೆಡೆ ಗಾಳಿ,ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿತ್ತು.ಮತ್ತೆ 18ದಿನಗಳ ಬಳಿಕ ಮಂಗಳವಾರ ಮಳೆ ಸುರಿದಿದೆ.
ಈಗಾಗಲೇ ತಾಲೂಕಿನ ಹಲವೆಡೆ ನೀರಿನ ತೊಂದರೆ ಕಂಡು ಬಂದಿದ್ದು ಜನತೆಗೆ ಸಮಸ್ಯೆ ಉಂಟಾಗಿತ್ತು.ನದಿ,ಕೆರೆ ಬತ್ತಿರುವ ಕಾರಣ ಹಲವು ಕೃಷಿ ತೋಟಗಳಿಗೂ ನೀರಾವರಿ ವ್ಯವಸ್ಥೆ ಇಲ್ಲದಾಗಿದೆ.ಮಂಗಳವಾರ ಕೆಲವೆಡೆ ಸುರಿದ ಮಳೆ ಜನರಲ್ಲಿ ಕೊಂಚ ಸಮಾಧಾನ ಮೂಡಿಸಿದೆ.