ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪೂರು ಸರಕಾರಿ ಪ್ರೌಢ ಶಾಲೆ ಬಳಿ ಶನಿವಾರ ನಾಲ್ವರು ಹುಡುಗರು ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ, ಅಸಭ್ಯವಾಗಿ ಕೈಸನ್ನೆ ಮಾಡಿ ಚುಡಾಯಿಸಿದ ಘಟನೆ ಸಂಭವಿಸಿದೆ.
9ನೇ ತರಗತಿ ಬಾಲಕಿ ಶಾಲೆ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಸ್ಕೂಟಿಯಲ್ಲಿ ಬಂದ ನಾಲ್ವರು ಹುಡುಗರು ಕೃತ್ಯ ಎಸಗಿದ್ದಾರೆ.
ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಂಧಿಸಿದ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.