

ಕಾರ್ಕಳ: ಏಕಾಏಕಿ ಮನೆಯೊಳಗೆ ಅಕ್ರಮ ಪ್ರವೇಶಿಸಿದ ಐವರು ಜಾಗದ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಕೌಡೂರು ಗ್ರಾಮದ ಮಲ್ಲಿಕಾ (51) ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜ. 1ರಂದು ಬೆಳಗ್ಗೆ ಗಾಯತ್ರಿ, ಸಾವಿತ್ರಿ, ಲತಾ, ಮದನ್ ಮತ್ತು ಪ್ರಶಾಂತ್ ಮನೆಗೆ ನುಗ್ಗಿ ಬೈದು, ಕೈ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದೆ.