April 16, 2026
WhatsApp Image 2026-04-16 at 6.01.03 PM
ಉಡುಪಿ : ವಾಟ್ಸಾಪ್ ಮೂಲಕ ಬಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ಪರಿಣಾಮ ಹಲವಾರು ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಆನ್‌ಲೈನ್ ವಂಚನೆ ಒಳಗಾಗಿರುವ ಘಟನೆ ಉಡುಪಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ದೂರಿನ ಪ್ರಕಾರ, ಪಡುಬಿದ್ರಿಯ ಹೆಜಮಾಡಿಯ ಅಬ್ದುಲ್ ಹಮೀದ್ ಅವರಿಗೆ ಏಪ್ರಿಲ್ 12 ರಂದು ಅವರ ಪರಿಚಯಸ್ಥ ಕುಮಾರಸ್ವಾಮಿ ಅವರ ಮೊಬೈಲ್ ಸಂಖ್ಯೆಯಿಂದ APK ಫೈಲ್ ಬಂದಿದ್ದು, ಫೈಲ್ ಡೌನ್‌ಲೋಡ್ ಮಾಡಿದ ನಂತರ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಏಪ್ರಿಲ್ 13 ರಂದು, ಹಂತ ಹಂತವಾಗಿ ಒಟ್ಟು 4.86 ಲಕ್ಷ ರೂ. ಹಣ ಕಡಿತವಾಗಿದೆ ಎಂದು ದೂರಲಾಗಿದೆ . ಉಡುಪಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

About The Author

Leave a Reply

Your email address will not be published. Required fields are marked *

You cannot copy content of this page.