March 16, 2025
vivek-560x438

ಉಳ್ಳಾಲ: ತುಳು ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ, ಕುಬ್ಜ ದೇಹದಿಂದಲೇ ಕಲಾ ರಸಿಕರನ್ನು ರಂಜನೆ ಮಾಡುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್‌ ಮಾಡೂರು (52) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿರುವ ವರದಿಯಾಗಿದೆ.

ನಿನ್ನೆ ರಾತ್ರಿ ತಮ್ಮ ಮನೆಯ ಶೌಚಾಲಯದಲ್ಲಿ ಏಕಾ ಏಕಿ ಬಿದ್ದಿದ್ದ ವಿವೇಕ್‌ ಅವರು ನಂತರ ನಿದ್ದೆಗೆ ಜಾರಿ ವಿಶ್ರಾಂತಿ ಪಡೆದಿದ್ದಾರೆ. ಬೆಳಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃತ ಹೊಂದಿರುವುದು ತಿಳಿದು ಬಂದಿದೆ.

ಟೆಲಿಫೋನ್‌ ಎಸ್‌ಟಿಡಿ ಬೂತ್‌ ನಡೆಸುತ್ತಿದ್ದ ವಿವೇಕ್‌ ಅವರು ಬೂತ್‌ ಮುಚ್ಚಿದ ನಂತರ ಅಣ್ಣನ ದಿನಸಿ ಅಂಗಡಿಯಲ್ಲಿ ಪ್ಲಾಸ್ಟಿಕ್‌ ಮನೆ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ವೃತ್ತಿಪರ ಹಾಸ್ಯ ಕಲಾವಿದರಾಗಿದ್ದ ವಿವೇಕ್‌ ಅವರು ಕರಾವಳಿಯ ಹೆಸರಾಂತ ನಾಟಕ ತಂಡಗಳಲ್ಲಿ ಅಭಿನಯ ಮಾಡಿದ್ದಾರೆ.

ವಿವೇಕ್‌ ಅವರ ಅಕಾಲಿಕ ಅಗಲಿಕೆಗೆ ತುಳು ರಂಗಭೂಮಿ, ಕೋಸ್ಟಲ್‌ವುಡ್‌ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.