ಉಡುಪಿ: ಜೂ.12-14 ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜೂನ್ 12ರಿಂದ 14ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/33/11 ಕೆವಿ ವಿದ್ಯುತ್ ಸ್ಥಾವರ ಮಣಿಪಾಲದಲ್ಲಿ 110 ಕೆವಿ ಬಸ್‌ನ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ, ಈ ಸ್ಥಾವರದಿಂದ ಹೊರಡುವ 110ಕೆವಿ ನಿಟ್ಟೂರು, 110ಕೆವಿ ಬ್ರಹ್ಮಾವರ, 33ಕೆವಿ ಶಿರ್ವ, 33ಕೆವಿ ಕುಂಜಿಬೆಟ್ಟು 1 ಮತ್ತು 2 ಮಾರ್ಗಗಳಲ್ಲಿ, 33 ಕೆವಿ ಮಲ್ಪೆ/ಉದ್ಯಾವರ ಹಾಗೂ ಎಲ್ಲಾ 11ಕೆವಿ ಫೀಡರಿನಲ್ಲಿ ಉಡುಪಿ, ಕುಂಜಿಬೆಟ್ಟು, ನಿಟ್ಟೂರು, ಮಲ್ಪೆ, ಉದ್ಯಾವರ, ಶಿರ್ವ, ಬ್ರಹ್ಮಾವರ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಜೂನ್ 12ರಂದು ಅಪರಾಹ್ನ 2ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110/11 ಕೆವಿ ಹಾಲಾಡಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣ ಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110/11ಕೆವಿ ಹಾಲಾಡಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ 11ಕೆವಿ ಶಂಕರನಾರಾಯಣ, ಆವರ್ಸೆ, ಬಿಕ್ಕಲ್ಕಟ್ಟೆ, ಬೆಳ್ವೆ, ವಾರಾಹಿ ಮತ್ತು ಹೈಕಾಡಿ ಮಾರ್ಗಗಳಲ್ಲಿ ಅಮಾಸೆಬೈಲು, ಕುಳುಂಜೆ, ಶಂಕರನಾರಾಯಣ, ಹಾಲಾಡಿ-76, ಮಚ್ಚಟ್ಟು, ಹಾಲಾಡಿ-28, ಹೆಂಗವಳ್ಳಿ, ಮಡಾಮಕ್ಕಿ, ಸಿದ್ದಾಪುರ, ಉಳ್ಳೂರು-74, ಕಕ್ಕುಂಜೆ, ಹೆಸ್ಕತ್ತೂರು, ಯಡಾಡಿ-ಮತ್ಯಾಡಿ, ಹಳ್ಳಾಡಿ-ಹರ್ಕಾಡಿ, ಹಾರ್ದಳ್ಳಿ-ಮಂಡಳ್ಳಿ, ಬೆಳೆ, ಮಡಾಮಕ್ಕಿ, ಅಲ್ಪಾಡಿ ಮತ್ತು ಶೇಡಿಮನೆ, ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 13ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

Check Also

ಕಾರ್ಕಳ: ಟಿಪ್ಪರ್‌ – ಸ್ಕೂಟಿ ಡಿಕ್ಕಿ : ಓರ್ವ ಸ್ಥಳದಲ್ಲೇ ಸಾವು – ಇಬ್ಬರಿಗೆ ಗಾಯ

ಕಾರ್ಕಳ : ಪಳ್ಳಿ ಗರಡಿ ರಸ್ತೆಯಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡ …

Leave a Reply

Your email address will not be published. Required fields are marked *

You cannot copy content of this page.