
ಉಡುಪಿ : ಆರ್ಥಿಕ ಸಮಸ್ಯೆಯಿಂದ ಅರ್ಚಕರೊಬ್ಬರ ಮಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕಕ್ಕುಂಜೆಯ ನಿವಾಸಿ ಅರ್ಚಕ ವಾಸುದೇವ ನಾಯಕ್ ಎಂಬವರ ಮಗ ಪುರುಷೋತ್ತಮ ನಾಯಕ್(52) ಎಂದು ಗುರುತಿಸಲಾಗಿದೆ.
ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬಾವಿ ಕಂಬಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ಬಿಗಿದು ಬಾವಿಗೆ ಹಾರಿದ್ದು, ಈ ವೇಳೆ ಅವರ ದೇಹದಿಂದ ರುಂಡ ಬೆರ್ಪಟ್ಟಿತ್ತೆನ್ನಲಾಗಿದೆ. ದೇಹದ ಭಾಗ ಬಾವಿಯಲ್ಲಿದ್ದರೆ, ರುಂಡ ಹಗ್ಗದಲ್ಲಿ ನೇತಾಡುತ್ತಿತ್ತು.
ಇವರು ಮಣಿಪಾಲದ ವ್ಯಾಲಿವ್ಯೂ ಹೋಟೆಲಿನಲ್ಲಿ ಅಸಿಸ್ಟೆಂಟ್ ಸುಪರ್ವಿಶನ್ ಎಲೆಕ್ಟಿçಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ನಿವೃತಿಯ್ತ ಹಂತದಲ್ಲಿದ್ದರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ಕಕ್ಕುಂಜೆಯ ಕಟ್ಟೆಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದರು. ಆರ್ಥಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೆAದು ಶಂಕಿಸಲಾಗಿದೆ. ಸ್ಥಳಕ್ಕೆ ಉಡುಪಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
