ಕುಂದಾಪುರ: ಕಾರಿನಲ್ಲಿ ಬಂದ ಅಪರಿಚಿತನೊಬ್ಬ ವ್ಯಕ್ತಿಯೊಬ್ಬರ ತೊಡೆಗೆ ಚೂರಿ ಇರಿದು ಪರಾರಿಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಖಾರ್ವಿಕೇರಿ ನಿವಾಸಿ ಬನ್ಸ್ ರಾಘು ಅಲಿಯಾಸ್ ರಾಘವೇಂದ್ರ ಶೇರೆಗಾರ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಚೂರಿ ಇರಿತಕ್ಕೊಳಗಾದ ರಾಘವೇಂದ್ರ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಜೆ ಸುಮಾರು ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಇರುವ ನ್ಯೂ ಡೆಲ್ಲಿ ಬಜಾರ್ ಅಂಗಡಿ ಎದುರು ಈ ಹಲ್ಲೆ ನಡೆದಿದೆ. ರಾಘವೇಂದ್ರ ಅವರು ತನ್ನ ಕಾರಿನಲ್ಲಿ ಬಂದಿದ್ದು ಇದೇ ಸಂದರ್ಭ ಇನ್ನೊಂದು ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ತಗಾದೆ ತೆಗೆದು ಚೂರಿಯಲ್ಲಿ ರಾಘವೇಂದ್ರ ಅವರ ತೊಡೆಗೆ ಚೂರಿ ಹಾಕಿ ಕಾರಿನಲ್ಲಿ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ. ಘಟನೆಗೆ ಹಳೆ ದ್ವೇಷವೇ ಕಾರಣ ಎಂದು ತಿಳಿದುಬಂದಿದೆ.