ವೇಣೂರು: ಪ್ಲಂಬರ್‍ಸ್ ಗಳ ಸಮ್ಮಿಲನ ಕಾರ್ಯಕ್ರಮ

ವೇಣೂರು, ಮೇ 3: ಅಸ್ಟ್ರಲ್ ಪೈಪ್ಸ್ ಮತ್ತು ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿ ವೇಣೂರು ಇದರ ಸಹಭಾಗಿತ್ವದಲ್ಲಿ ಪ್ಲಂಬರ್‍ಸ್‌ಗಳ ಸಮ್ಮಿಲನ ಕಾರ್ಯಕ್ರಮವು ವೇಣೂರು ಗಾರ್ಡನ್ ವ್ಯೂ ಸಭಾಂಗಣದಲ್ಲಿ ಜರಗಿತು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಸ್ಟ್ರಲ್ ಪೈಪ್ಸ್ ಸಂಸ್ಥೆಯ ವಿನಾಯಕ್ ಅವರು ಮಾರುಕಟ್ಟೆಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಿದರು.

ಬಳಿಕ ವಿವಿಧ ಮನೋರಂಜನ ಕಾರ್ಯಕ್ರಮ ಜರಗಿತು. ವೇಣೂರು ಧನಲಕ್ಷ್ಮೀ ಸಂಸ್ಥೆಯ ಮಾಲಕ ಬಿ. ಮಂಜುನಾಥ್ ನಾಯಕ್, ನಾಯಕ್ ಸಮೂಹ ಸಂಸ್ಥೆಗಳ ಬಿ. ಜಗದೀಶ್ ನಾಯಕ್, ಬಿ. ಮೋಹನದಾಸ್ ನಾಯಕ್ ಉಪಸ್ಥಿತರಿದ್ದರು.

ಸುಮಾರು 80 ಮಂದಿ ಪ್ಲಂಬರ್‍ಸ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆದಿತ್ಯ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Check Also

ಉಡುಪಿ : ನಕಲಿ ಚಿನ್ನ ಅಡವಿಟ್ಟು ವಂಚನೆ, ಉತ್ತರ ಕನ್ನಡದ ನಾಲ್ವರ ಬಂಧನ

ಉಡುಪಿ ಜಿಲ್ಲೆಯ  ಪಡುಬಿದ್ರಿಯಲ್ಲಿ ಆರೋಪಿ ರಾಜೀವ್ 30ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಸ್ಥಳೀಯವಾಗಿ ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ …

Leave a Reply

Your email address will not be published. Required fields are marked *

You cannot copy content of this page.