ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಮತ್ತೆ ತಾಂತ್ರಿಕ ದೋಷ ಎದುರಾಗಿದ್ದು, ಸುಮಾರು 80 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿಯೋಜನೆಯ ಹಣ ತಲುಪಿಲ್ಲ.
ತಾಂತ್ರಿಕ ಸಮಸ್ಯೆಯಿಂದಾಗಿ 80 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ತಲುಪಿಲ್ಲ.
ಲೋಕಸಭೆ ಚುನಾವಣೆ ಬಳಿಕ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನ ಖಾತೆಗೆ ಹಾಕಿರಲಿಲ್ಲ. ಮೂರು ತಿಂಗಳ ಬಳಿಕ ಜೂನ್ ತಿಂಗಳ ಗೃಹಲಕ್ಷ್ಮಿ ಹಣವನ್ನ ಕಳೆದ ತಿಂಗಳಿನಿಂದ ಹಾಕಲಾಗುತ್ತಿದೆ. ಆದರೆ ಹಣ ಹಾಕುವಾಗ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದು, ಒಟ್ಟು 80 ಸಾವಿರ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿಯ ಹಣ ಖಾತೆಗೆ ಬಂದಿಲ್ಲ. ಹೀಗಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿಯಲ್ಲಿ 1 ಕೋಟಿ 23 ಲಕ್ಷ ಗೃಹಲಕ್ಷ್ಮಿ ಫಾಲಾನುಭವಿಗಳಿದ್ದು, 90 ಲಕ್ಷ ಜನರ ಖಾತೆಗೆ ಮಾತ್ರ ಹಣ ಜಮಾವಣೆಯಾಗಿದೆ. ಉಳಿದ 80 ಸಾವಿರ ಜನರ ಖಾತೆಯ ತಾಂತ್ರಿಕ ಸಮಸ್ಯೆಗಳನ್ನ ಬಗೆಹರಿಸಿ, ಬಲಿಕ ಹಣ ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.