ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಯ ಸಮೀಪದ ಸರಕಾರಿ ಬಾವಿ ಬಳಿ ನಿಗೂಢ ರೀತಿಯಲ್ಲಿ ಗಂಡಸಿನ ಶವವು ಪತ್ತೆಯಾಗಿರುವ ಘಟನೆ ಸಂಭವಿಸಿದೆ. ಶವವು ನೇಣು ಕುಣಿಕೆಯಲ್ಲಿ ಕಂಡುಬಂದಿದ್ದು, ಮೃತಪಟ್ಟು ಬಹಳ ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ನಗರ ಪೋಲಿಸ್ ಠಾಣೆಯ ಎಸ್.ಐ ಪುನೀತ್ ಕುಮಾರ್ ಬಿ.ಇ, ಎ.ಎಸ್.ಐ ಹರೀಶ್, ಜಾಸ್ವ, ಹಾಗೂ ರೈಲ್ವೆ ಆರ್.ಪಿ.ಎಫ್ ಸುಧೀರ್ ಶೆಟ್ಟಿ ಭೇಟಿ ನೀಡಿ ಕಾನೂನು ಪ್ರಕ್ರಿಯೆ ನಡೆಸಿದರು.ಮಹಜರು ಪ್ರಕ್ರಿಯೆ ಬಳಿಕ ಶವವನ್ನು ಅಜ್ಜರಕಾಡಿನ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಯಿತು. ಈ ವ್ಯಕ್ತಿಯನ್ನು ಕೊಂದು ನೇತು ಹಾಕಿರಬಹುದೆ ಅಥವಾ ಇದೊಂದು ಆತ್ಮಹತ್ಯೆಯೇ ಎಂಬ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
Check Also
ಉಡುಪಿ: ಮೂರೂವರೆ ವರ್ಷದ ಕಂದಮ್ಮನಿಗೆ ಮನಸೋಇಚ್ಚೆ ಹಲ್ಲೆ- ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು
ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ …