ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಕಂಡಿಸಿ ಸೆ. 29ರ ಇಂದು ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಆದರೆ ಕರಾವಳಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.
ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.
ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.
ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.