ಯುವವಾಹಿನಿ ರಿ ಕುಪ್ಪೆಪದವು ಘಟಕದ ವತಿಯಿಂದ ನಾಲ್ಕನೇ ವರ್ಷದ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಯು ದಿನಾಂಕ 25/08/2024ರಂದು ಆಶಾಕಿರಣ ಹಾಲ್ ಕುಪ್ಪೆಪದವು ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಡೆಗುಂಡ್ಯಾ ಇಲ್ಲಿನ ಪ್ರದಾನ ಅರ್ಚಕ ವೇದಮೂರ್ತಿ ಶ್ರೀ ಸದಾಶಿವ ಕಾರಂತ ಇವರು ಕಾರ್ಯಕ್ರಮಕ್ಕೆ ಶುಭಾಶ್ರಿವಾದ ಮಾಡಿದರು, ಶಾಸಕರಾದ ಶ್ರೀ ವೈ ಭರತ್ ಶೆಟ್ಟಿ ಅವರು ಶುಭ ನುಡಿದರು.
ಈ ಸಂದರ್ಭದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಷ್ಮಾ ಸಂತೋಷ್, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶ್ರೀ ಸತೀಶ್ ಪೂಜಾರಿ, ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಶ್ರೀಮತಿ ಮಾಲತಿ, ಪಂಚಾಯತ್ ಸದಸ್ಯರಾದ ಶ್ರೀ ತಾರಾನಾಥ್, ಶ್ರೀ ಥೋಮಸ್ ಹೆರಾಲ್ಡ್ ರೋಸರಿಯೋ, ಶ್ರೀ ಜಗದೀಶ್, ದುರ್ಗಾ ಕೊಡಿ, ಹಾಜರಿದ್ದರು, ನಂತರ ನಡೆದ ಒಂದರಿಂದ ಹತ್ತು ವರ್ಷಗಳ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಯು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು, ಒಟ್ಟು ಅರುವತ್ತೆರಡು ಸ್ಪರ್ಧಾಳುಗಳು ಭಾಗವಹಿಸಿದರು, ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಒಡ್ಡುರೂ, ಇಲ್ಲಿನ ಮಕ್ಕಳಿಂದ ಹಾಗು ಯುವವಾಹಿನಿ ಸದಸ್ಯ ರ ಮಕ್ಕಳಿಂದ ವಿವಿಧ ರೀತಿಯ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು, ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ ಕುಪ್ಪೆಪದವು ಘಟಕದ ಅಧ್ಯಕ್ಷ ರಾದ ಶ್ರೀ ಆಕ್ಷಿತ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಯಾಗಿ ಕುಪ್ಪೆಪದವು ಇಗರ್ಜಿಯ ಧರ್ಮ ಗುರುಗಳಾದ ಮಾರ್ಷಲ್ ಸಲ್ದಾನ, ಮಾತನಾಡಿದ ಇವರು ಶ್ರೀ ಕೃಷ್ಣ ಪರಮಾತ್ಮನ ಲೀಲೆಗಳನ್ನು ವಾಹಿನಿಗಳಲ್ಲಿ ನೋಡುತ್ತಿದ್ದೆ ಆದರೆ ಇಂದು ನಮ್ಮ ಕಣ್ಣೆದುರಿಗೇ ಮಕ್ಕಳಿಂದ ನೋಡುವ ಬಾಗ್ಯ ಸಿಕ್ಕಿತು ಎಂದು ಹೇಳಿದರು ಅತಿಥಿಯಾಗಿ ಶ್ರೀ ನವೀನ್ ಚಂದ್ರ ಪೂಜಾರಿ, ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ನಾರಾಯಣ ಗುರು ತತ್ವ ಪರಿಪಾಲನ ಸಂಘ ಕರ್ನಾಟಕ, ಇವರು ಮಾತನಾಡಿ ಇಂದಿನ ಈ ಕಾಲಘಟ್ಟದಲ್ಲಿ ಜಾತಿ ಧರ್ಮ ಆಧಾರಿತ ಸಂಘರ್ಷಗಳು ನಡೆಯುತ್ತಿರುವ ಕಾಲದಲ್ಲಿ ಸರ್ವ ಸಮಾನತೆಯ ಸಂದೇಶ ಸಾರಿರುವ ಶ್ರೀ ಕೃಷ್ಣ ಪರಮಾತ್ಮನ ವಿವಿಧ ರೀತಿಯ ಕೃಷ್ಣ ಲೀಲೆಗಳನ್ನು ಇಂದು ಪುಟಾಣಿ ಮಕ್ಕಳಿಂದ ಸಂದೇಶ ಸಾರುವಂತ ಕೆಲಸವೂ ಅಭಿನಂದನೀಯ ಎಂದರು ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರವೀಣ್ ಆಳ್ವ ಗುಂಡ್ಯ ಇವರು ಮಾತನಾಡಿ ನಮ್ಮ ಊರಿನ ಯುವವಾಹಿನಿ ಸದಸ್ಯರು ಹಲವಾರು ಸಾಮಾಜಿಕ ಕಾರ್ಯಗಳನ್ನು ನಾನು ಕಣ್ಣಾರೆ ಕಂಡಿರುತೇನೆ ಇವರ ಕಾರ್ಯವು ಶ್ಲಾಘನೀಯವಾಗಿದೆ, ಹಾಗು ಇಂದು ಇಲ್ಲಿ ನಡೆದಿರುವ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯು ಮಕ್ಕಳಿಗೆ ಒಂದು ಉತ್ತಮ ವೇದಿಕೆಯಾಗಿದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ರೀತಿಯ ಸಂತೋಷವಾಗುತ್ತದೆ ಎಂದರು, ಯುವವಾಹಿನಿ ಕುಪ್ಪೆಪದವು ಘಟಕದ ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಶ್ರೀಮತಿ ಅಕ್ಷತಾ ಹಾಗು ತೀರ್ಪುಗಾರರಾದ ಶ್ರೀಮತಿ ಗೀತಾ , ಮತ್ತು ಶ್ರೀಮತಿ ಪ್ರೇಮಾ ಇವರುಗಳು ವೇದಿಕೆಯಲ್ಲಿದ್ದರು, ಈ ಕಾರ್ಯಕ್ರಮದಲ್ಲಿ ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷ ಕೇಂದ್ರ ಸಮಿತಿಯ ನಿರ್ದೇಶಕ, ಹಾಗು ಕುಪ್ಪೇಪದವು ಘಟಕದ ಪ್ರಮುಖ ಸ್ಪೂರ್ತಿದಾಯಕ, ಸಮಾಜಮುಖಿ, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ,ಶ್ರೀ ದೇವರಾಜ್ ಅಮೀನ್ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮವನ್ನು ಯುವವಾಹಿನಿ ಕುಪ್ಪೆಪದವು ಘಟಕದ ಸ್ಥಾಪಕ ಅಧ್ಯಕ್ಷ ರಾದ ಶ್ರೀ ಅರುಣ್ ಕುಮಾರ್ ಸ್ವಾಗತಿಸಿದರು ಘಟಕದ ಕಾರ್ಯದರ್ಶಿ ಶ್ರೀಮತಿ ರೇಣುಕಾ ಧನ್ಯವಾದ ಅರ್ಪಿಸಿದರು ಯುವವಾಹಿನಿ ಸದಸ್ಯೆ ಕುಮಾರಿ ದನ್ಯಶ್ರಿ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದಲ್ಲಿ ವಿವಿಧ ಘಟಕದ ಅಧ್ಯಕ್ಷರು ಸದಸ್ಯರು ಕುಪ್ಪೆಪದವು ಘಟಕದ ಸರ್ವಸದಸ್ಯರು ಹಿತೈಷಿಗಳು ಇತರ ಪ್ರಮುಖರು, ಹಾಜರಿದ್ದರು.