ಉಡುಪಿ: ಕೆರೆಗೆ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಉಡುಪಿಯ ಕರಂಬಳಿಯಲ್ಲಿ ನಡೆದಿದೆ.
ಇಂದ್ರಾಳಿ ನಿವಾಸಿ ಹಾಗೂ ಮಣಿಪಾಲದ ವಿದ್ಯಾರ್ಥಿ ಸಿದ್ದಾರ್ಥ್ ಶೆಟ್ಟಿ (17) ಮೃತ ದುರ್ದೈವಿ.
ಮೃತ ಸಿದ್ದಾರ್ಥ್ ಮತ್ತಿಬ್ಬರೊಂದಿಗೆ ಕರಂಬಳಿ ಕೆರೆಗೆ ಈಜಲು ತೆರಳಿದ್ದ. ಆದರೆ ಸಿದ್ದಾರ್ಥ್ ಮಾತ್ರ ನೀರಿಗಿಳಿದಿದ್ದು, ಇನ್ನಿಬ್ಬರು ನೀರಿಗೆ ಇಳಿದಿರಲಿಲ್ಲ ಎನ್ನಲಾಗಿದೆ.
ಪ್ರತ್ಯೇಕ ಘಟನೆಯೊಂದರಲ್ಲಿ, ಅಲೆವೂರಿನ ನಿಲೇಪಾಡೆ ನದಿಯಲ್ಲಿ ನಾಲ್ವರು ಈಜಲು ಹೋಗಿ ಇಬ್ಬರು ನದಿಗೆ ಬಿದ್ದಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರು ನುಗ್ಗಿ ಅವಘಡ ಸಂಭವಿಸಿದೆ.
ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.