ಕುಪ್ಪೆಪದವಿನಲ್ಲಿ ನಾರಾಯಣ ಗುರುಗಳ 170 ನೇ ಜಯಂತಿ ಕಾರ್ಯಕ್ರಮ

ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಂದಿರ ಕುಪ್ಪೆಪದವು ನೆಳಚ್ಚಿಲ್ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170 ಗುರು ಪೂಜಾ ಕಾರ್ಯಕ್ರಮ ನಡೆಯಿತು. ಇದರ ಪ್ರಯುಕ್ತ ಬೆಳಿಗ್ಗೆ ಗಣ ಹೋಮ ಬಳಿಕ ನಾರಾಯಣ ಗುರು ಮಹಿಳಾ ಮಂಡಳಿಯ ಹಾಗೂ ರಾಮಾಂಜನೇಯ ಭಜನಾ ಮಂದಿರ ರತ್ನಗಿರಿ ಬಳ್ಳಾಜೆ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನಡೆಯಿತು. ಬಳಿಕ ಗುರುಗಳಿಗೆ ಮಹಾಮಂಗಳಾರತಿ ನಡೆಯಿತು. ಬಲಿಕ ನಡೆದ ಸಭಾ ಕಾರ್ಯಕ್ರಮವನ್ನು ನಿಲಯ ಎಂ ಅಗರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಮಚಂದ್ರ ಸಾಲಿಯನ್ ತಾಳಿಪಾಡಿ ವಹಿಸಿದ್ದರು . ಸಂಘದ ವತಿಯಿಂದ ಬಿಲ್ಲವ ಸಮಾಜ ಬಾಂಧವರ 43 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಬಳಿಕ ಹಿರಿಯರಾದ ಸೀತು ಪೂಜಾರ್ತಿ ಐನ, ಹಲವಾರು ವರ್ಷಗಳಿಂದ ಮುರ್ತೆ ದಾರಿಕೆ ಮಾಡುತ್ತಿದ್ದ ನಾರಾಯಣ ಪೂಜಾರಿ ಕೆಳಗಿನ ಐನ , ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ವರುಷಗಳಿಂದ ಸೇವೆ ಸಲ್ಲಿಸುತ್ತಿರುವ ಸುರೇಶ್ ಬಳ್ಳಿ, ಹಾಗೂ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ನೀಲಯ ಎಂ ಅಗರಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್, ಕೆಎಂಸಿ ಪ್ರೊಫೆಸರ್ ಶಶಿಧರ್ ಕೋಟ್ಯನ್, ನಾರಾಯಣ ಗುರು ಬಿಲ್ಲವ ಯುವ ವೇದಿಕೆ ಕುಪ್ಪೆ ಪದ ಇದರ ಅಧ್ಯಕ್ಷರಾದ ಶೇಖರ ನೆಳಚ್ಚಿಲ್, ಮತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರವೀಣ್ ಆಳ್ವ ಉಪಾಧ್ಯಕ್ಷರಾದ ಶ್ರೀಮತಿ ಸುಷ್ಮಾ, ಸದಸ್ಯರಾದ ಸತೀಶ್ ಬಲ್ಲಾಜೆ, ಶ್ರೀಮತಿ ಮಾಲತಿ, ಶ್ರೀಮತಿ ಶಶಿಕಲಾ, ಜಗದೀಶ್ ದುರ್ಗ ಕೊಡಿ, ಗಜಾನನ ಕನ್ಸ್ಟ್ರಕ್ಷನ್ ಕುಪ್ಪೆ ಪದವ್ ಇದರ ಮಾಲಕರಾದ ಜಗದೀಶ್ ಕುಲಾಲ್, ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಗಿರೀಶ್ ಆಳ್ವ ಮಹಿಳಾಮಂಡಲದ ಅಧ್ಯಕ್ಷರಾದ ಜಯಂತಿ ಅಟ್ಟೆ ಪದವ್, ಹಾಗೂ ಪದಾಧಿಕಾರಿಗಳು ಸಂಘದ ಸದಸ್ಯರು ಸಾರ್ವಜನಿಕರು ಉಪಸಿತರಿದ್ದರು ಸಂಘದ ಕಾರ್ಯದರ್ಶಿ ರಘು ಎಂ ಅಗರಿ ವರದಿ ವಾಚಿಸಿದರು. ಸತೀಶ್ ಬಲ್ಲಾಜೆ ಸ್ವಾಗತಿಸಿ, ಯಶವಂತ ಎಂ ಅಗರಿ ಕಾರ್ಯಕ್ರಮ ನಿರೂಪಿಸಿದರು. ಮಹಾಬಲ ಸಾಲಿಯನ್ ಧನ್ಯವಾದ ಸಮರ್ಪಿಸಿದರು.

Check Also

ಬಂಟ್ವಾಳ: ಬ್ಯಾಂಕ್ ಶಾಖೆಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ಇದ್ದ ಬ್ಯಾಗ್ ಕಳವು

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನ ಬ್ಯಾಂಕ್ ಶಾಖೆಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ರೂ. ನಗದು ಇದ್ದ ಬ್ಯಾಗ್‌ ಎಗರಿಸಿ ಪರಾರಿಯಾಗಿರುವ …

Leave a Reply

Your email address will not be published. Required fields are marked *

You cannot copy content of this page.