ಉಡುಪಿ: ಅಪರಿಚಿತ ವಾಹನ ಢಿಕ್ಕಿ; ಸವಾರ ಮೃತ್ಯು

ಉಡುಪಿ : ಅಪರಿಚಿತ ವಾಹನ ಢಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಕೋಟದ ಕಾವಡಿಯಲ್ಲಿ ಸಂಭವಿಸಿದೆ

ಬಾರ್ಕೂರು ಸಮೀಪ ಹೇರಾಡಿ ನಿವಾಸಿ ನಾಗೇಶ್‌ ಆಚಾರ್ಯ (32) ಮೃತ ಯುವಕ.

ಮೃತ ನಾಗೇಶ್‌ ಅವರು ಕೋಟ ಸಮೀಪದ ಖಾಸಗಿ ಗೇರುಬೀಜ ಕಾರ್ಖಾನೆಯಲ್ಲಿ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ವಾಪಸಾಗುವಾಗ ಕಾವಡಿ ಸೇತುವೆ ಸಮೀಪ ಯಾವುದೋ ವಾಹನ ಢಿಕ್ಕಿಯಾಗಿ ಬಿದ್ದುಕೊಂಡಿದ್ದರು.

ಇನ್ನು ಸ್ವಲ್ಪ ಸಮಯದ ಬಳಿಕ ಪರಿಚಯಸ್ಥರೋರ್ವರು ಅದೇ ದಾರಿಯಲ್ಲಿ ಬರುವಾಗ ಗಮನಿಸಿ ಚಿಕಿತ್ಸೆಗಾಗಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅಪಘಾತವೆಸಗಿದ ವಾಹನ ಸವಾರನು ವಾಹನವನ್ನು ನಿಲ್ಲಿಸದೇ ಹಾಗೂ ಗಾಯಾಳುವಿಗೆ ಚಿಕಿತ್ಸೆ ಕೊಡಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Check Also

ಮಣಿಪಾಲ: ಹಾಸ್ಟೆಲ್‌ನಲ್ಲಿ ವಾಸವಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: ಹಾಸ್ಟೆಲ್‌ನಲ್ಲಿ ವಾಸವಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಹಿತೇಂದ್ರ (26) ಅವರು ಜೀವನದಲ್ಲಿ ಜಿಗುಪ್ಪೆಯಿಂದ ತಾನು ವಾಸವಿದ್ದ ರೂಮ್‌ ನಲ್ಲಿ …

Leave a Reply

Your email address will not be published. Required fields are marked *

You cannot copy content of this page.