January 22, 2025
WhatsApp Image 2024-09-22 at 2.55.10 PM

ಬೆಂಗಳೂರು : ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದ್ದು, ದಟ್ಟಣೆ ಕಡಿಮೆಗೊಳಿಸಲು ಅ.1 ರಿಂದ ಅ.15ರವರೆಗೆ ನೈಋತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನುಜೋಡಿಸಲು ನಿರ್ಧರಿಸಿದೆ. ಮೈಸೂರು-ಬೆಳಗಾವಿ-ಮೈಸೂರು ಎಕ್ಸ್​​​ಪ್ರೆಸ್​​​​​​​​​, ಮೈಸೂರು-ಚಾಮರಾಜ-ಮೈಸೂರು ಎಕ್ಸ್​​​ಪ್ರೆಸ್​​​​​​, ಮೈಸೂರು-ಬಾಗಲಕೋಟೆ-ಮೈಸೂರು-ಮೈಸೂರು ಬಸವ ಎಕ್ಸ್​​​​​​ಪ್ರೆಸ್​​​, ಹುಬ್ಬಳ್ಳಿ- ಮೈಸೂರು-ಹುಬ್ಬಳ್ಳಿ ಹಂಪಿ ಎಕ್ಸ್​​​ಪ್ರೆಸ್​​​, ಮೈಸೂರು-ಪಂಡರಪುರ- ಮೈಸೂರು-ಗೋಲ್​​​​​​ಗುಂಬಜ್​​​​​ ಎಕ್ಸ್​​​​ಪರ್ಎಸ್​​ ರೈಲುಗಳಿಗೆ ತಲಾ 1 ಸ್ಲೀಪರ್​​ ಕ್ಲಾಸ್​​ ಬೋಗಿಗಳನ್ನು ಜೋಡಣೆಯನ್ನು ಮಾಡುವುದಾಗಿ ಇಲಾಖೆ ತಿಳಿಸಿದೆ. ಮೈಸೂರು-ತಾಳಗುಪ್ಪ- ಮೈಸೂರು ಎಕ್ಸ್​​ಪ್ರೆಸ್​​​​ ರೈಲುಗಳಿಗೆ ತಲಾ ಎರಡ ಸ್ಲೀಪರ್​​​ ಕ್ಲಾಸ್​ ಬೋಗಿಗಳ ಜೋಡಣೆಯನ್ನು ಅಳವಡಿಸಲಾಗುತ್ತಿದೆ.

About The Author

Leave a Reply

Your email address will not be published. Required fields are marked *

You cannot copy content of this page.