ಪ್ಯಾರ ಮೆಡಿಕಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ: ಮಂಗಳೂರಿನ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿಯ ನೆರಿಯದಿಂದ ವರದಿಯಾಗಿದೆ.

ನೆರಿಯ ಗ್ರಾಮದ ನೆಕ್ಕರೆಯ ನಿವಾಸಿ ದಾಸ್ ಎಂಬವರ ಮಗಳು ಆದೀರಾ (19) ಸಾವನ್ನಪ್ಪಿದ್ದ ಯುವತಿ.

ಆದೀರಾ, ಸಹೋದರರಾದ ನರೇಂದ್ರ ಮತ್ತು ರೋಹಿತ್ ಅವರ ಜೊತೆ ಕಳೆದ ಮೂರು ತಿಂಗಳಿನಿಂದ ಮಂಗಳೂರಿನ ಕುಲಶೇಖರದ ಬಾಡಿಗೆ ಮನೆಯಲ್ಲಿದ್ದರು‌. ಅಲ್ಲಿಂದಲೇ ತೆರಳಿ ಪ್ಯಾರಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು.

ಆದರೆ ಕಳೆದ ಆದಿತ್ಯವಾರ ರಾತ್ರಿ ಮೂವರು ಒಟ್ಟಿಗೆ ಊಟ ಮಾಡಿ ಒಂದು ಕೋಣೆಯಲ್ಲಿ ಅದಿರಾ ಮಲಗಿದ್ದು ಮತ್ತೊಂದು ಕೋಣೆಯಲ್ಲಿ ನರೇಂದ್ರ ಮತ್ತು ರೋಹಿತ್ ಮಲಗಿದ್ದರೆನ್ನಲಾಗಿದೆ. ಆದರೆ ಜೂನ್ 19 ಸೋಮವಾರ ಬೆಳಗ್ಗೆ 8 ಗಂಟೆಗೆ ಎದ್ದು ನರೇಂದ್ರ ನೋಡುವಾಗ ಅದಿರಾ ತನ್ನ ಚೂಡಿದಾರ್ ಶಾಲಿನಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು ತಕ್ಷಣ ತಂದೆ ದಾಸ್ ಅವರಿಗೆ ಈ ಬಗ್ಗೆ ತಿಳಿಸಿದ್ದಾರೆ.

ಬಳಿಕ ಸ್ಥಳೀಯರ ಸಹಕಾರದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮಗಳನ್ನು ಕೊಂಡು ಹೋಗಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಪರೀಕ್ಷಿಸಿದ ವೈದ್ಯರು ಯುವತಿ ಮೃತ ಪಟ್ಟಿರುವುದಾಗಿ ಧೃಡಪಡಿಸಿದ್ದಾರೆ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯುವತಿಯ ಮೊಬೈಲ್ ವಿವರಗಳನ್ನು ಪರಿಶೀಲನೆ ನಡೆಸುತಿದ್ದಾರೆ.

Check Also

ಉಡುಪಿ: ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆ

ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಪೀಠಗಳಲ್ಲೊಂದಾದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ …

Leave a Reply

Your email address will not be published. Required fields are marked *

You cannot copy content of this page.