BREAKING NEWS; ಖ್ಯಾತ ಮಲಯಾಳಂ ಹಾಸ್ಯ ನಟಿ ಸುಬಿ ಸುರೇಶ್‌ ಇನ್ನಿಲ್ಲ..!

ಕೊಚ್ಚಿ: ಖ್ಯಾತ ಮಲಯಾಳಂ ಹಾಸ್ಯ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್‌ ನಿಧನರಾಗಿದ್ದಾರೆ. 42 ವರ್ಷ ವಯಸ್ಸಿನ ಸುಬಿ ದೀರ್ಘ ಕಾಲದಿಂದ ಯಕೃತ್‌ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ಮುಂಜಾನೆ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರುಳೆದಿದ್ದಾರೆ. ತಮ್ಮ ವಾಕ್ಚಾತುರ್ಯ ಮತ್ತು ಹಾಸ್ಯಪ್ರಜ್ಞೆಗೆ ಹೆಸರು ಪಡೆದಿದ್ದ ಸುಬಿ ಓರ್ವ ನೃತ್ಯಗಾತಿ ಮತ್ತು ಕಾಮಿಡಿಯನ್‌ ಆಗಿ ವೃತ್ತಿಜೀವನ ಆರಂಭಿಸಿದ್ದರು. ಮುಂದೆ ಅವರು ಟಿವಿ ಶೋಗಳಾದ ಮಝವಿಲ್‌ ಮನೋರಮಾದ “ಮೇಡ್‌ ಫಾರ್‌ ಈಚ್‌ ಅದರ್”‌ ಮತ್ತು ಸೂರ್ಯ ಟಿವಿಯ “ಕುಟ್ಟಿ ಪಟ್ಟಲಂ” ನಲ್ಲಿ ನಿರೂಪಕಿಯಾಗಿದ್ದರು. ಸುಬಿ ಅವರು ಗೃಹನಾಥನ್,‌ ತಕ್ಸರ ಲಹಲ, ಎಲ್ಸಮ್ಮ ಎನ್ನ ಆಂಕುಟ್ಟಿ, ಡ್ರಾಮ, ಕಾರ್ಯಸ್ಥಾನ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದರು. ಅವರು ಫಿಟ್ನೆಸ್‌ ತಜ್ಞೆಯೂ ಆಗಿದ್ದರಲ್ಲದೆ ಕೋವಿಡ್‌ ಲಾಕ್‌ಡೌನ್ ವೇಳೆ ಆಕೆ ಹೊರತಂದ ವರ್ಕೌಟ್‌ ವೀಡಿಯೋಗಳು ಬಹಳ ಜನಪ್ರಿಯವಾಗಿದ್ದರು.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.