ಮೂಡುಬಿದಿರೆ: ಬಾಳೆಹೊನ್ನೂರಿನಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಮೂಡುಬಿದಿರೆಗೆ ಬೈಕ್ ನಲ್ಲಿ ಮರಳುತ್ತಿದ್ದ ವೇಳೆ ಭಾನುವಾರ ರಾತ್ರಿ ಬೆಳುವಾಯಿಯಲ್ಲಿ ಬೈಕ್ ಸ್ಕಿಡ್ ಆಗಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೆರವುಗೊಳಿಸಿದ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ರಾಣಿಕೇರಿ ನಿವಾಸಿ, ಮೂಲತಃ ಚಿಕ್ಕಮಗಳೂರಿನ ರಾಜೇಶ್ (28)ಮೃತಪಟ್ಟ ಬೈಕ್ ಸವಾರ.
ರಾಜೇಶ್ ಅವರು ಭಾನುವಾರ ಬಾಳೆಹೊನ್ನೂರಿನಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ, ಮೂಡುಬಿದಿರೆಗೆ ಮರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಗಾಗಿ ಮರ ಕಡಿದು ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದು,ಬೆಳುವಾಯಿ ಬಳಿ ಬೈಕ್ ಸ್ಕಿಡ್ ಆಗಿ, ಸವಾರನ ತಲೆ ಮರಕ್ಕೆ ಡಿಕ್ಕಿ ಹೊಡೆದಿದೆ. ತಲೆಗೆ ಬಲವಾದ ಪೆಟ್ಟು, ರಕ್ತಸ್ರಾವದಿಂದ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.