BIGG NEWS: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ತೀರ್ಥಹಳ್ಳಿ ಐದು ಮನೆಗಳ ಮೇಲೆ ಪೊಲೀಸರ ದಾಳಿ, ಮುಂದುವರೆದ ಶೋಧ ಕಾರ್ಯ

ಶಿವಮೊಗ್ಗ: ಮಂಗಳೂರು ಆಟೋದಲ್ಲಿ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರಿಗೆ ಸಂಬಂಧಪಟ್ಟಿದೆ ಎನ್ನಲಾದ ತೀರ್ಥಹಳ್ಳಿಯ ಐದು ಮನೆಗಳ ಮೇಲೆ ಇಂದು ಬೆಳಗಿನ ಜಾವ ಪೊಲೀಸರಿಂದ ದಾಳಿ ನಡೆಸಿದ್ದಾರೆ.

ಮಂಗಳೂರು ಕೋರ್ಟ್‌ ನಿಂದ ಸರ್ಚ್‌ ವಾರೆಂಟ್‌ ಪಡೆದು ಈ ದಾಳಿ ನಡೆಸಲಾಗಿದೆ. ಮೋಸ್ಟ್‌ ವಾಂಟೆಡ್‌ ಮತೀನ್‌ , ಬಂಧಿತ ಮಾಜ್‌ ಗೆ ಸಂಬಂಧಿಸಿದ ಎರಡು ಮನೆಗಳು ಮೇಲೂ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಸಾಜಿದ್‌ ಮತ್ತು ಶಾರೀಕ್‌ ಸಂಬಂಧಿಯೊಬ್ಬರ ಮನೆಯಲ್ಲೂ ಪರಿಶೀಲನೆ ನಡೆದಿದೆ. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಆಗುಂಬೆ ಠಾಣಾಧಿಕಾರಿ ಶಿವಕುಮಾರ್‌ , ಮಾಳೂರು ಠಾಣಾಧಿಕಾರಿ ಪ್ರವೀಣ್‌ ನೀಲಮ್ಮನವರ್‌ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಎಸಗಿದ ಕೃತ್ಯಗಳ ಕುರಿತು ಕೆಲವು ಸಾಕ್ಷ್ಯಾಧಾರಗಳು ಮತ್ತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ.

Check Also

ಮಂಗಳೂರು: ಪಿಎಂ ಇಜಿಪಿ, ಮುದ್ರಾಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ – ಸಂಸದ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇಜಿಪಿ ಹಾಗೂ ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ ಮಹಿಳೆಯರು …

Leave a Reply

Your email address will not be published. Required fields are marked *

You cannot copy content of this page.