April 20, 2026
WhatsApp Image 2026-04-20 at 9.00.44 AM

ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ತಂದೆಯೊಬ್ಬ ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ರಾಕ್ಷಸನಂತೆ ಕೊಲೆ ಮಾಡಿದ್ದಾನೆ. ಕಾನ್ಪುರದ ನಿವಾಸವೊಂದರಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆ ಬಳಿಕ ಪೊಲೀಸರಿಗೆ ಕರೆ ಮಾಡಿ ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.

ಹೌದು 48 ವರ್ಷದ ಮೆಡಿಕಲ್ ರೆಪ್ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆರೋಪಿ ಮತ್ತು ಆತನ ಪತ್ನಿ ರೇಷ್ಮಾ ಛೆಟ್ರಿ 2014 ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಸಂಸಾರದಲ್ಲಿ ನಂತರ ಬಿರುಕು ಮೂಡಿತು. ಆರೋಪಿ ಮದ್ಯವ್ಯಸನಿಯಾಗಿದ್ದು, ಪತ್ನಿಗೆ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದ. ಎಷ್ಟರಮಟ್ಟಿಗೆ ಅಂದರೆ, ಮನೆಯ ಪ್ರತಿಯೊಂದು ಮೂಲೆಯಲ್ಲಿ ಹಾಗೂ ಮಲಗುವ ಕೋಣೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪತ್ನಿಯ ಮೇಲೆ ನಿಗಾ ಇಟ್ಟಿದ್ದ.

ಅಲ್ಲದೇ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಶಿ ರಂಜನ್ ಮಿಶ್ರಾ ಅನುಮಾನಿಸಿದ್ದ. ಆಕೆ ತನ್ನ ಮಗನೊಂದಿಗೆ ವಾಸಿಸಬೇಕು ಮತ್ತು ಹೆಣ್ಣುಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಆಗಾಗ್ಗೆ ಹೇಳುತ್ತಿದ್ದ. ಶನಿವಾರ ರಾತ್ರಿ ಊಟ ಮಾಡಿದ ನಂತರ, ಪತಿ ಹೆಣ್ಣುಮಕ್ಕಳನ್ನು ಮಲಗಿಸಲು ಕರೆದೊಯ್ದಿದ್ದಾನೆ. ತಡರಾತ್ರಿ 2:30ರ ಸುಮಾರಿಗೆ ಒಬ್ಬ ಮಗಳನ್ನು ಶೌಚಾಲಯಕ್ಕೆ ಕರೆದೊಯ್ದ ನಂತರ ಇಬ್ಬರೂ ಕೋಣೆಗೆ ಹಿಂತಿರುಗಿದ್ದಾರೆ. ಬಳಿಕ ಲೈಟ್ ಆಫ್ ಮಾಡಲಾಯಿತು ಎಂದು ರೇಷ್ಮಾ ತಿಳಿಸಿದ್ದಾರೆ.

ಇದಾಗಿ ಎರಡು ಗಂಟೆಗಳ ನಂತರ, ಶಶಿ ರಂಜನ್ ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ವಿಷಯ ತಿಳಿಸಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಇಬ್ಬರು ಹೆಣ್ಣಮಕ್ಕಳು ಕತ್ತು ಸೀಳಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದರು. ಸದ್ಯ ಘಟನೆ ಸಂಬಂಧ ತಂದೆ ಶಶಿ ರಂಜನ್‌ನನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ದೀಪೇಂದ್ರ ನಾಥ್ ಚೌಧರಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.