ಮದ್ಯ ಸೇವಿಸುವಾಗ ನಾಯಿಮರಿಗಳ ಬಾಲ, ಕಿವಿ ಕತ್ತರಿಸಿ ತಿಂದ ಕುಡುಕ!

ಲಕ್ನೋ : ಕುಡುಕನೊಬ್ಬ ಮದ್ಯ ಸೇವಿಸಿದ ಅಮಲಿನಲ್ಲಿ 2 ನಾಯಿಮರಿಗಳ ಬಾಲ ಮತ್ತು ಕಿವಿಗೆ ಉಪ್ಪು ಸವರಿ ಸ್ನ್ಯಾಕ್ಸ್ ತಿಂದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಬರೇಲಿ ಜಿಲ್ಲೆಯ ಫರೀದ್ಪುರ ಪ್ರದೇಶದ ಎಸ್ಡಿಎಂ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ. ಆರೋಪಿ ಮುಖೇಶ್ ವಾಲ್ಮೀಕಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಈ ಅಮಾನವೀಯ ಕೃತ್ಯ ಎಸಗಿದ್ದಾನೆ.

ಕುಡುಕ ಮುಖೇಶ್ 2 ನಾಯಿ ಮರಿಗಳ ಒಂದು ಕಿವಿ ಹಾಗೂ ಬಾಲವನ್ನು ಕತ್ತರಿಸಿ ಮದ್ಯದೊಂದಿಗೆ ಸೇವಿಸಿದ್ದಾನೆ. ಇದರಿಂದಾಗಿ 2 ನಾಯಿ ಮರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವೆರೆಡು ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿವೆ.

ಘಟನೆಗೆ ಸಂಬಂಧಿಸಿ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಸದಸ್ಯ ಧೀರಜ್ ಪಾಠಕ್ ಎಂಬಾತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Check Also

ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ …

Leave a Reply

Your email address will not be published. Required fields are marked *

You cannot copy content of this page.