ಗಂಡ ಊಟಕ್ಕೆ ಬರಲಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ ಪತ್ನಿ

ಬೆಂಗಳೂರು: ಗಂಡ ಊಟಕ್ಕೆ ಬರಲಿಲ್ಲವೆಂದು ಬೇಸರಗೊಂಡು ಟೆಕ್ಕಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೇಣಿಗೆ ಶರಣಾಗಿರುವ ಮಹಿಳೆಯನ್ನು ಸ್ವಾತಿ ಅಂತ ತಿಳಿದು ಬಂದಿದ್ದು, ಸ್ವಾತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಆಕೆ ತನ್ನ ಬಾಲ್ಯದ ಗೆಳೆಯನ ಜೊತೆಗೆ ಕಳೆದೆರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ಅವರ ಮದುವೆಗೆ ಇಬ್ಬರ ಮನೆಯವರು ಕೂಡ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ.

 

ಈ ನಡುವೆ ಎರಡು ದಿ‌ನದ ಹಿಂದೆ ಮನೆಯಲ್ಲಿ ಸ್ವಾತಿಗೆ ಇಶ್ಟವಿರದ ಅಡುಗೆ ಮಾಡಿದ್ದರಂತೆ. ಇದರಿಂದ ಬೇಸರಗೊಂಡಿದ್ದ ಸ್ವಾತಿ ಊಟ ಮಾಡದೇ ಮಲಗಿಕೊಂಡಿದ್ದರಂಂತೆ. ಮರು ದಿನ ಬೆಳಗ್ಗೆ ಗಂಡ ದಾಮೋದರ್‌, ಸ್ವಾತಿಗೆ ಕರೆ ಮಾಡಿ ಇಂದು ಮಧ್ಯಾಹ್ನ ಜೊತೆಯಲ್ಲಿ ಊಟ ಮಾಡೋಣ ಅಂತ ಹೇಳಿ ಸಮಾಧಾನ ಮಾಡಿದ್ದಾರೆ. ದಾಮೋದರ್‌ ಸ್ವಾತಿ ಆಫೀಸ್‌ಗೆ ಊಟವನ್ನು ಆನ್‌ಲೈನ್‌ ಮೂಲಕ ಬುಕ್‌ ಮಾಡಿದ್ದಾರೆ. ಆದರೆ ದಾಮೋದರ್‌ ಕೆಲಸದ ಒತ್ತಡದಿಂದ ಅಂದು ಸ್ವಾತಿ ಜೊತೆಗೆ ಊಟಕ್ಕೆ ಹೋಗಿಲ್ಲ ಎನ್ನಲಾಗಿದೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಸ್ವಾತಿ ಮನೆಗೆ ಬಂದು ಯಾರು ಇಲ್ಲದ ವೇಳೇಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಬಸವೇಶ್ವರ ನಗರ‌ ಪೊಲೀಸ್ ಠಾಣೆಯಲ್ಲಿ ‌ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Check Also

ಉಳ್ಳಾಲ: ಹರೇಕಳ-ಅಡ್ಯಾರ್ ಹೊಸ ಸೇತುವೆಯಲ್ಲಿ ಅಪಘಾತ : ಮೂವರಿಗೆ ಗಾಯ

ಉಳ್ಳಾಲ: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಹರೇಕಳ- ಅಡ್ಯಾರ್ ನೂತನ ಸೇತುವೆಯಲ್ಲಿ ಇಂದು ಸಂಭವಿಸಿದೆ …

Leave a Reply

Your email address will not be published. Required fields are marked *

You cannot copy content of this page.