
ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಬಿಗ್‌ಬಾಸ್ ಮೂಲಕ ಎಲ್ಲರ ಮನೆಮಗಳಾಗಿ ಜನಪ್ರಿಯತೆ ಗಳಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ಅವರಿಗೆ ರಘು ಜತೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ದೊಡ್ಮನೆಯಲ್ಲಿ ಮಾತ್ರ ಕೊನೆಗಾನಿಸದೆ, ಅದು ಮುಗಿದ ಬಳಿಕವೂ ಬಾಂಧವ್ಯ ಮುಂದುವರೆದಿದೆ.
ರಕ್ಷಿತಾ ಶೆಟ್ಟಿ ಉಡುಪಿ ಸಮೀಪದ ತಮ್ಮ ಹಳ್ಳಿಯಲ್ಲಿ ‘ಪಟಾಕಿ ಕಿಚನ್’ ಹೆಸರಿನ ಹೊಸ ಉದ್ಯಮವನ್ನು ಆರಂಭಿಸಿದ್ದು, ಈ ಕಿಚನ್ ಅನ್ನು ಸಾಂಪ್ರದಾಯಿಕ ಶೈಲಿಯ ‘ಡೊಂಪ ಹಟ್’ ಮಾದರಿಯಲ್ಲಿ ನಿರ್ಮಿಸಲಾಗಿದೆ, ಇದು ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತದೆ.
ಬಿಗ್‌ಬಾಸ್ ಮನೆಯಲ್ಲಿ ಪಟಾಕಿ ರಕ್ಷಿತಾ ಎಂದೇ ಫೇಮಸ್ ಆಗಿದ್ದ ರಕ್ಷಿತಾ, ಅದನ್ನೇ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಕಿಚನ್‌ಗೆ ‘ಪಟಾಕಿ ಕಿಚನ್’ ಎಂದು ನಾಮಕರಣ ಮಾಡಿದ್ದಾರೆ. ಉದ್ಘಾಟಿಸಲು ರಘು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದು, ರಿಬ್ಬನ್ ಕಟ್ ಮಾಡಿ ಕಿಚನ್ ಉದ್ಘಾಟನೆ ಮಾಡಿದರು.
ಮಣ್ಣಿನ ಹೂಜಿಯಲ್ಲಿ ನೀರನ್ನು ಇಟ್ಟು, ಅಲ್ಲಿನ ಗೋಡೆಯ ಮೇಲೆ ರಕ್ಷಿತಾ ಫೋಟೋ ಇದ್ದು, ಅದಕ್ಕೆ ಹಲವು ಕೈಗಳಿವೆ. ಪಟಾಕಿ ಕಿಚನ್ ಅಲ್ಲಿ ರಘು ಅವರೇ ಮೊದಲ ಅಡುಗೆ ಮಾಡಿದ್ದಾರೆ.
ರಕ್ಷಿತಾ ಅವರು ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿದ್ದಾಗ ಕಿಚನ್ ಮಾಡುವ ಕನಸಿದೆ ಎಂದು ಹೇಳಿಕೊಂಡಿದ್ದರು. ಇದೀಗ ಅವರ ಕನಸು ನನಸಾಗಿದೆ. ವಿಡಿಯೊದಲ್ಲಿ ಮಣ್ಣಿನಿಂದ ತಯಾರಿಸಿದ ಪಾತ್ರೆಗಳನ್ನು ಬಳಸಿ ಅಡುಗೆ ತಯಾರಿಸುವುದನ್ನು ತೋರಿಸಲಾಗಿದೆ. ಕಿಚನ್ ಅನ್ನು ಮರಗಳ ಹಲಗೆ ಹಾಗೂ ನೈಸರ್ಗಿಕ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ.
