April 20, 2026
WhatsApp Image 2026-02-09 at 11.00.03 AM

ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಪಾಪಿ ಮಗಳೋಬ್ಬಳು ಪ್ರಿಯಕರಣಿಗೆ ತನ್ನ ತಾಯಿ ಹಾಗೂ ಸಂಬಂಧಿಕರ ಖಾಸಗಿ ಫೋಟೋ ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿನ್ನೆಲೆ ತಾಯಿ ಮಗಳು ಮತ್ತು ಆಕೆ ಪ್ರಿಯಕರನ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿದ್ಯಾಭ್ಯಾಸಕ್ಕೆ ಎಂದು ಯುವತಿ ಪೋಷಕರ ಬಳಿ ಮೊಬೈಲ್ ಪಡೆದಿದ್ದಳು. ತಿಂಗಳ ಹಿಂದೆ ಯುವಕನ ಜೊತೆ ಮಾತನಾಡಿ ಯುವತಿ ಸಿಕ್ಕಿಬಿದ್ದಿದ್ದಾಳೆ. ಆದರೆ ಮೊಬೈಲ್ ಮತ್ತು ಪಾಸ್ವರ್ಡ್ ನೀಡಿದ 23 ವರ್ಷದ ಮಗಳು, ಇತ್ತೀಚಿಗೆ ತಂದೆಗೆ ವಿಷಯ ತಿಳಿಸಿ ತಾಯಿ ಪಾಸ್ವರ್ಡ್ ಪಡೆದಿದ್ದಳು. ಮೊಬೈಲ್ ಪರಿಶೀಲನೆ ಮಾಡಿದಾಗ ಮಗಳ ಈ ಒಂದು ಕೃತ್ಯ ಬೆಳಕಿಗೆ ಬಂದಿದೆ.

ತಾಯಿ ಮತ್ತು ಆಂಟಿ ಮಲಗಿದ್ದಾಗ ಖಾಸಗಿ ಫೋಟೋ ತೆಗೆದು ಮಗಳು ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈ ಕುರಿತು ಪ್ರಶ್ನೆ ಮಾಡಿದಾಗ ಆತನನ್ನೇ ಮದುವೆಯಾಗುವುದಾಗಿ ಮಗಳು ಹಠಕ್ಕೆ ಬಿದ್ದಿದ್ದಾಳೆ. ಮಗಳಿಗೆ ಬುದ್ಧಿ ಹೇಳಿ ತಾಯಿ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ತಾಯಿ ಠಾಣೆಗೆ ದೂರು ನೀಡಿದ್ದಾರೆ. ಹಾಗಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.