ಉಡುಪಿ: ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಬಡಗುಬೆಟ್ಟುವಿನ ಇಂದಿರಾನಗರದಲ್ಲಿರುವ ಅಜ್ಜಿ ಮನೆಯಿಂದ ನ.28ರಂದು ಹೋದ ನಿಖಿತಾ(19) ಎಂಬಾಕೆ ಈವರೆಗೆ ವಾಪಾಸ್ ಬಾರದೆ ನಾಪತ್ತೆಯಾಗಿದ್ದಾರೆ.
ಸಪೂರ ಶರೀರ, ಗೋದಿ ಮೈಬಣ್ಣ ಹೊಂದಿರುವ ಈಕೆ, ಪಿಂಕ್ ಚೂಡಿ ದಾರದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರು ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.