ಉಡುಪಿ : ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣದ ತನಿಖೆ ಒಂದು ಆಯಾಮದಲ್ಲಿ ನಡೆದರೆ ,ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.ಪ್ರಮುಖ ಆರೋಪಿ ಅಲ್ತಾಫ್ ಅತ್ಯಾಚಾರ ಎಸಗಿದ್ದರೆ ಅಭಯ್ ಎಂಬಾತ ಕೃತ್ಯ ನಡೆದ ಸ್ಥಳಕ್ಕೆ ಡ್ರಗ್ಸ್ ತಂದು ಕೊಟ್ಟಿದ್ದ. ಡ್ರಗ್ಸ್ ತಂದು ಕೊಟ್ಟವರಿಗೆ ತಿರುಪತಿ, ಬೆಂಗಳೂರು ತನಕ ಸಂಪರ್ಕ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂದೂ ಯುವತಿಯನ್ನು ಆಗಸ್ಟ್ 24 ರಂದು ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್, ರಿಚರ್ಡ್ ಕ್ವಾಡ್ರಸ್ ಹಾಗೂ ಅಭಯ್ ಎಂಬ ಮೂವರನ್ನು ಬಂಧಿಸಲಾಗಿದೆ. ಜೊತೆಗೆ ಮತ್ತಿಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಈತನಕ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್ಪಿ ಮಾಹಿತಿ ನೀಡಿದ್ದಾರೆ. ಇನ್ನು ಯುವತಿಗೆ ನೀಡಲಾದ ಡ್ರಗ್ಸ್ ಮೂಲದ ಬಗ್ಗೆ ತನಿಖೆ ನಡೆದಿದ್ದು ಅದು ಎಂಡಿಎಂಎ ಎಂಬುದು ಗೊತ್ತಾಗಿದೆ. ಇದನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ ಗೆ ಕಳಿಸಲಾಗಿದೆ. ಡ್ರಗ್ಸ್ ಬೆಂಗಳೂರು, ತಿರುಪತಿಯಿಂದ ಸರಬರಾಜು ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಭಯ್ ಹಾಗೂ ಇನ್ನಿಬ್ಬರು ಶಂಕಿತರನ್ನು ಪೊಲೀಸರು ಬೆಂಗಳೂರು ಹಾಗೂ ತಿರುಪತಿಗೆ ಕರೆದೊಯ್ದಿದ್ದಾರೆ. ಜೊತೆಗೆ ಬೆಂಗಳೂರು ಸಿಸಿಬಿ ಪೊಲೀಸರ ಸಹಕಾರವನ್ನೂ ಪಡೆಯಲಾಗಿದೆ ಎಂದು ಉಡುಪಿ ಎಸ್ಪಿ ಮಾಹಿತಿ ನೀಡಿದ್ದಾರೆ.
Check Also
ಉಡುಪಿ: ಮೂರೂವರೆ ವರ್ಷದ ಕಂದಮ್ಮನಿಗೆ ಮನಸೋಇಚ್ಚೆ ಹಲ್ಲೆ- ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು
ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ …