ಮಂಗಳೂರು: ಗಣೇಶೋತ್ಸವ ಹಾಗೂ ಮೀಲಾದುನ್ನಬಿ ಆಚರಣೆಯ ಪ್ರಯುಕ್ತ ನಗರದಲ್ಲಿ ಶಾಂತಿ ಕಾಪಾಡಬೇಕು ಮತ್ತು ಎಲ್ಲಾ ಧರ್ಮದ ಮುಖಂಡರು ಇದಕ್ಕೆ ಸಹಕರಿಸಬೇಕೆಂದು ಮಂಗಳೂರು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ತನ್ನ ಕಚೇರಿಯಲ್ಲಿ ಸೋಮವಾರ ಶಾಂತಿ ಸಭೆ ನಡೆಸಿ ಧಾರ್ಮಿಕ ಮತ್ತು ಸಮಾಜದ ಮುಖಂಡರಿಗೆ ಕೆಲವೊಂದು ಸೂಚನೆಗಳನ್ನು ಆಯುಕ್ತರು ನೀಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.6ರಿಂದ ಸೆ.17ರವರೆಗೆ 165 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಈ ಪೈಕಿ 22 ಅತೀ ಸೂಕ್ಷ್ಮ, 64 ಸೂಕ್ಷ್ಮ, 79 ಸಾಮಾನ್ಯ ಗಣೇಶ ಪ್ರತಿಷ್ಠಾಪನಾ ಮೆರವಣಿಗೆಗಳಿವೆ. ಅದಲ್ಲದೆ ಸೆ.15/16ರಂದು ಮೀಲಾದುನ್ನಬಿ ಆಚರಣೆ ನಡೆಯಲಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.6ರಿಂದ ಸೆ.17ರವರೆಗೆ 165 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಈ ಪೈಕಿ 22 ಅತೀ ಸೂಕ್ಷ್ಮ, 64 ಸೂಕ್ಷ್ಮ, 79 ಸಾಮಾನ್ಯ ಗಣೇಶ ಪ್ರತಿಷ್ಠಾಪನಾ ಮೆರವಣಿಗೆಗಳಿವೆ. ಅದಲ್ಲದೆ ಸೆ.15/16ರಂದು ಮೀಲಾದುನ್ನಬಿ ಆಚರಣೆ ನಡೆಯಲಿದೆ. ಹಾಗಾಗಿ ಎಲ್ಲಾ ಧರ್ಮದ ಹಿರಿಯ ಮುಖಂಡರು ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
- ಪ್ರತಿಷ್ಠಾಪನೆಯ ಮೊದಲು ಮೆಸ್ಕಾಂ, ಅಗ್ನಿಶಾಮಕ ನಿಗಮ/ಸ್ಥಳೀಯ ಸಂಸ್ಥೆಗಳಿಂದ ಅನುಮತಿಗಳನ್ನು ಪಡೆದು ಕೊಳ್ಳ ಬೇಕು. ಗಣಪತಿ ವಿಗ್ರಹ ಪ್ರತಿಷ್ಠಾನೆಯ ಸ್ಥಳದ ಮಾಲಕರ ಅನುಮತಿ ಪಡೆದುಕೊಳ್ಳಬೇಕು. ಗಣೇಶ ಪೆಂಡಾಲುಗಳನ್ನು ಸುರಕ್ಷಿತವಾಗಿ ಹಾಕಲು ವ್ಯವಸ್ಥೆ ಮಾಡಬೇಕು. ಈ ಪೆಂಡಾಲ್ ಮಳೆ, ಗಾಳಿ, ಬೆಂಕಿಗಳಿಂದ ಸುರಕ್ಷಿತವಾಗಿರುವಂತೆ ನಿಗಾವಹಿಸಲು ಸೂಚಿಸಲಾಗಿದೆ.