
ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯ ಟ್ರಾಲ್ ಬೋಟ್‌ನಲ್ಲಿ ಮೀನು ಖಾಲಿ ಮಾಡಲು ಬೋಟ್‌ನ ಸ್ಟೋರೇಜ್‌ಗೆ ಇಳಿದಿದ್ದ ಇಬ್ಬರು ಒಡಿಶಾ ಮೂಲದ ಕಾರ್ಮಿಕರು ಗ್ಯಾಸ್‌ನಿಂದಾಗಿ ಉಸಿರಾಟದ ತೊಂದರೆಗೊಳಗಾದರು. ಪ್ರಜ್ಞಾಹೀನರಾಗಿ ಬೋಟ್‌ನ ಸ್ಟೋರೇಜ್‌ನಲ್ಲಿದ್ದ ಇಬ್ಬರನ್ನು ಆಪತ್ಬಾಂಧವ ಈಶ್ವರ್ ಮಲ್ಪೆ ಪ್ರಥಮ ಚಿಕಿತ್ಸೆ ಮಾಡಿ ತತ್‌ಕ್ಷಣ ಆ್ಯಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು. ಇಬ್ಬರು ಕಾರ್ಮಿಕರೂ ಚೇತರಿಸಿಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.