ಮೃತರಿಗೆ 5 ಜನ ಮಕ್ಕಳಿದ್ದು ಅವರ ಗಂಡ 3 ವರ್ಷದ ಹಿಂದೆ ಮರಣ ಹೊಂದಿದ ಬಳಿಕ ಒಬ್ಬರೇ ವಾಸಿಸುತ್ತಿದ್ದರು. ಮಕ್ಕಳು ಆಗಾಗ್ಗೆ ಬಂದು ಹೋಗುತಿದ್ದರು.
ಆ.26ರಂದು ಮಗಳು ವಿಜಯ್ ಅವರು ಸುಮತಿ ರವರನ್ನು ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದು ಪ್ರತಿ ನಿತ್ಯದಂತೆ ಆಗಸ್ಟ್ 27 ರಂದು ರಾತ್ರಿ 10:30 ಗಂಟೆಗೆ ತಾಯಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದೇ ಇದ್ದಾಗ ತನ್ನ ಇಬ್ಬರು ಮಕ್ಕಳಾದ ರೋಶನ್ ಮತ್ತು ಮೋಹಿತ್ ರನ್ನು ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದು, ಅವರಿಬ್ಬರು ಅಲ್ಲಿಗೆ ಹೋಗಿ ನೋಡಿ ಸುಮತಿಯವರು ಮಲಗಿದ್ದಾಗಿ, ಕರೆದರೂ ಏಳುತ್ತಿಲ್ಲ ಎಂದು ತಿಳಿಸಿದ್ದಾರೆ. ಕೂಡಲೇ ತನ್ನ ಗಂಡನೊಂದಿಗೆ ಅಲ್ಲಿಗೆ ಹೋಗಿ ನೋಡಿದಾಗ, ತಾಯಿ ಮಾಡನಾಡದೇ ಇದ್ದು 108 ನೇ ವಾಹನಕ್ಕೆ ಕರೆ ಮಾಡಿ ಆ ವಾಹನದಲ್ಲಿ ಸ್ಥಳೀಯರ ಸಹಾಯದೊಂದಿಗೆ ಕಾಪುವಿನ ಪ್ರಶಾಂತ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ವಿಚಾರಿಸಿ ಕೆಎಮ್ ಸಿ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಮಣಿಪಾಲದ ಕೆಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಪರೀಕ್ಷಿಸಿದ ಅಲ್ಲಿನ ವೈದ್ಯಾದಿಕಾರಿಯವರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ತಾಯಿಯವರ ಮುಖವು ಊದಿಕೊಂಡಿದ್ದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್, ಒಂದು ಜೊತೆ ಬಳೆ, ಉಂಗುರ ಸ್ವತುಗಳು ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮನೆಯ ಬೇರೆ ಎಲ್ಲಾ ಸ್ವತ್ತುಗಳು ಯಥಾ ಸ್ಥಿತಿಯಲ್ಲಿರುತ್ತವೆ. ಸುಮತಿಯವರ ಮರಣದಲ್ಲಿ ಸಂಶಯವಿರುವುದಾಗಿ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.