February 18, 2025
PSX_20240924_090021

ಕಾರ್ಕಳ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್‌ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್‌ (ಶಿವ ಕುಮಾರ್‌) ಅವರನ್ನು ಸೋಮವಾರ ಕಾರ್ಕಳ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಹಾಜರುಪಡಿಸಲಾಯಿತು.

ನಕ್ಸಲ್‌ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್‌ ನನ್ನು ಬೆಂಗಳೂರು ಪೊಲೀಸರು ಬಿಗಿ ಭದ್ರತೆಯೊಂದಿಗೆ ಮಂಗಳೂರಿಗೆ ಕರೆತಂದು ಸೋಮವಾರ ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

2011ರ ನ. 19ರಂದು ಹೆಬ್ರಿ ತಾಲೂಕು ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಕನ್ಯಾಕುಮಾರಿ ಮತ್ತು ರಮೇಶ್‌ ನನ್ನು ಸೋಮವಾರ ವಿಚಾರಣೆ ನಡೆಸಲಾಯಿತು.

ಸದಾಶಿವ ಗೌಡ ಅವರನ್ನು ಕನ್ಯಾಕುಮಾರಿಯನ್ನೊಳಗೊಂಡ ನಕ್ಸಲ್‌ ತಂಡವು ಅಪಹರಣ ಮಾಡಿ ಗುಂಡಿಕ್ಕಿ ಕೊಲೆ ನಡೆಸಿತ್ತು ಎಂಬ ಆರೋಪ ಇವರ ಮೇಲಿದೆ. ಹೀಗಾಗಿ ಕಾರ್ಕಳ ಡಿವೈಎಸ್ಪಿ ಅರವಿಂದ್‌ ಎನ್‌. ಕಲಗುಜ್ಜಿ ನೇತೃತ್ವದ ತಂಡ ಇವರಿಬ್ಬರನ್ನು ತೀವ್ರ ವಿಚಾರಣೆ ನಡೆಸಿತು.

About The Author

Leave a Reply

Your email address will not be published. Required fields are marked *

You cannot copy content of this page.