ಮಂಗಳೂರು : ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ವೈದ್ಯರೋರ್ವರು ಕಂಠಪೂರ್ತಿ ಕುಡಿದು ಆಸ್ಪತ್ರೆಗೆ ಬಂದ ಘಟನೆ ನಡೆದಿದೆ.
ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜು ಆಸ್ಪತ್ರೆಯ ಪಿಜಿ ವೈದ್ಯನೋರ್ವ ಕುಡಿದು ತೂರಾಡುತ್ತ ಬಂದಿದ್ದು ರೋಗಿಗಳು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಕುಡಿದು ಬಿದ್ದು ಶರ್ಟ್ ನಲ್ಲಿ ಮಣ್ಣಗಿದ್ದ ವೈದ್ಯ ರಾತ್ರಿ ಓಪಿಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೋಗಿಗಳ ಕಡೆಯವರು ವಿಡಿಯೋ ಮಾಡಿದಾಗ ಸಿಬ್ಬಂದಿಗಳು ಆತನನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.