ಸುರತ್ಕಲ್:  ರೈಲು ಹಳಿ ಮೇಲೆ ಅಪರಿಚಿತ ಯುವಕನ ಶವ ಪತ್ತೆ..!

ಸುರತ್ಕಲ್: ಅಪರಿಚಿತ ಯುವಕನೊಬ್ಬನ ಮೃತದೇಹವು ಕುಳಾಯಿಗುಡ್ಡೆ ರೈಲ್ವೆ ಸೇತುವೆಯಿಂದ ಸುರತ್ಕಲ್ ಕಡೆಗೆ 200 ಮೀಟರ್ ದೂರದಲ್ಲಿರುವ ರೈಲ್ ಹಳಿಗಳ ಮೇಲೆ ಪತ್ತೆಯಾಗಿದೆ.

ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ ಎಂದು ಅಂದಾಜಿಸಲಾಗಿದ್ದು, ಈತ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮೃತ ವ್ಯಕ್ತಿಯು ಕಪ್ಪು ನೈಟ್ ಪ್ಯಾಂಟ್, ಹಳದಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಜರ್ಕಿನ್ ಧರಿಸಿರುತ್ತಾರೆ.

ಮೃತ ವ್ಯಕ್ತಿಯ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಯನ್ನು 0824-2220540 ಗೆ ಸಂಪರ್ಕಿಸಲು ಕೋರಲಾಗಿದೆ.

Check Also

ಭಾಷೆ..ಗಡಿ ದಾಟಿದ ಯಕ್ಷಗಾನ: ಉಡುಪಿಯಲ್ಲಿ ಮೋದಿ ಊರಿನ ಕುವರರಿಗೆ ತರಬೇತಿ

ಉಡುಪಿ: ಭಾಷೆಯ ಗಡಿಗಳನ್ನು ದಾಟಿ ಯಕ್ಷಗಾನ ಬೆಳೆಯುತ್ತಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು, …

Leave a Reply

Your email address will not be published. Required fields are marked *

You cannot copy content of this page.